ಬೆಂಗಳೂರು, ಜನವರಿ 23, 2025
ಮೈಕ್ರೋಫೈನಾನ್ಸ್ ಇಂಡಸ್ಟ್ರಿ, ನೆಟ್ವರ್ಕ್ (MFIN), ಅಸೋಸಿಯೇಶನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಸಿಟ್ಯೂಷನ್ (AKMI) ಜೊತೆ, "ಸಮಾಜದ ಹಿಂದುಳಿದ ವರ್ಗಗಳ ಜೀವನವನ್ನು ಸುಧಾರಿಸುವಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿರ್ಣಾಯಕ ಪಾತ್ರವನ್ನು" ವಿಶದವಾಗಿ ಹೇಳಲು ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತು. ಈ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ, ಎಂಎಫ್ಐಎನ್ ರಾಜ್ಯ ಉಪಕ್ರಮಗಳ ಮುಖ್ಯಸ್ಥರಾದ ಶ್ರೀ ರಾಮ ಕಾಮರಾಜುರವರು, ಐಐಎಫ್ಎಲ್ ಸಮಸ್ತದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೆಂಕಟೇಶ್ ಎನ್ ಮತ್ತು ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ನನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆನಂದ್ ರಾವ್ ಅವರು, 'ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಬೆಳೆಸುವಲ್ಲಿ ಮೈಕ್ರೋಫೈನಾನ್ಸ್ ಸಾಲಗಳ ಅಪಾರ ಕೊಡುಗೆಯ' ಬಗ್ಗೆ ಒತ್ತಿ ಹೇಳಿದರು.
ಸಾಲ ಮತ್ತು ಅಗತ್ಯ ಹಣಕಾಸು ಸೇವೆಗಳು ಭಾರತದ ಅತ್ಯಂತ ದೂರದ ಮೂಲೆಗಳನ್ನು ತಲುಪುವಂತೆ ನೋಡಿಕೊಳ್ಳುವಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿವೆ. ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಮೈಕ್ರೋಫೈನಾನ್ಸ್ ಸಾಲಗಳ ಮೂಲಕ ಒಂದು ಕೋಟಿಗೂ ಹೆಚ್ಚು ವ್ಯಕ್ತಿಗಳ (ಅನನ್ಯ ಸಾಲಗಾರರು) ಜೀವನವನ್ನು ಪರಿವರ್ತಿಸಿದ್ದು, ಪ್ರಸ್ತುತ 63 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಒಟ್ಟು ಸಾಲದ ಬಂಡವಾಳವು ಕಳೆದ ಹಣಕಾಸು ವರ್ಷದಲ್ಲಿ (ಮಾರ್ಚ್-2019) ರೂ.16,946 ಕೋಟಿಗಳಷ್ಟಿತ್ತು, ಅದು ಪ್ರಸ್ತುತ ವೃದ್ಧಿಯಾಗಿ ರೂ. 42,265 ಕೋಟಿಗಳಿಗೆ ಏರಿದ್ದು, ಇದು ಸಾವಿರಾರು ಮಹಿಳೆಯರು, ಕುಟುಂಬಗಳು ಮತ್ತು ಸಮುದಾಯಗಳು ಸಬಲೀಕರಣಹೊಂದಿ ಅಭಿವೃದ್ಧಿ ಹೊಂದುವಂತೆ ಮಾಡಿವೆ.
ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಗ್ರಾಹಕರು ತಮ್ಮ ಕುಟುಂಬದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು, ನೂತನ ಮಾರ್ಗಗಳನ್ನು ಅನ್ವೇಷಿಸಲು ಉತ್ಸುಕತೆಯನ್ನು ತೋರಿಸಿದ್ದಾರೆ. ಉತ್ತಮ ಸಾಲ ಶಿಸ್ತು, ಸಾಲಗಳ ನಿಯಮಿತ ಮರುಪಾವತಿ ಮತ್ತು ಸಾಲ ನೀಡುವ ಸಂಸ್ಥೆಗಳ ಸಲಹೆಯನ್ನು ಗೌರವಿಸುವ ಬಗ್ಗೆ ಕಲಿಯುವಲ್ಲಿ ಗ್ರಾಹಕರು ಇದೇ ರೀತಿಯ ಉತ್ಸಾಹವನ್ನು ತೋರಿಸಿದ್ದಾರೆ.
MFINನ ರಾಜ್ಯ ಉಪಕ್ರಮಗಳ ಮುಖ್ಯಸ್ಥರಾದ ಶ್ರೀ ರಾಮ ಕಾಮರಾಜುರವರು ಮಾತನಾಡುತ್ತಾ,
"ಕರ್ನಾಟಕ ರಾಜ್ಯದಲ್ಲಿ ಆರ್ಬಿಐ ನಿಯಂತ್ರಿತ ಮೈಕ್ರೋಫೈನಾನ್ಸ್ ಘಟಕಗಳ ಕಾರ್ಯಾಚರಣೆಗಳು, ನೋಟು ರದ್ದತಿ ಮತ್ತು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿಯೂ ಕೂಡ ಸುಗಮ ಹಾದಿಯಲ್ಲಿ ಸಾಗಿದವು. ರಾಜ್ಯದ ಮಹಿಳಾ ಸಾಲಗಾರರು ಅಸಾಧಾರಣ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತಾ, ವರ್ಷಗಳ ಕಾಲ ಅತ್ಯುತ್ತಮ ಸಾಲಶಿಸ್ತನ್ನು ಕಾಯ್ದುಕೊಂಡಿದ್ದಾರೆ. ನಿಯಂತ್ರಿತ ಎಂಎಫ್ಐಗಳು ನೀಡುವ ಸಾಲಗಳು "ಮಹಿಳಾ ಅಭಿವೃದ್ಧಿ" ಯಿಂದ "ಮಹಿಳಾ ನೇತೃತ್ವದ ಅಭಿವೃದ್ಧಿ" ಯೆಡೆಗೆ ನಿರೂಪಣೆಯನ್ನು ಬದಲಾಯಿಸಲು ನಿಸ್ಸಂದಿಗ್ಧವಾಗಿ ಸಹಾಯ ಮಾಡಿವೆ ಎಂದು ಹೇಳಿದರು. ಮಹಿಳೆಯರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕಾಗಿ ಮೈಕ್ರೋಫೈನಾನ್ಸ್ ವ್ಯಾಪಕ ಮನ್ನಣೆಯನ್ನು ಪಡೆದಿದ್ದು, ಇದು ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರಿಗೆ ಸರಿಯಾದ ಮತ್ತು ಅರ್ಹ ಪಾತ್ರವನ್ನು ಗಳಿಸಿಕೊಟ್ಟಿದೆ. ಸರ್ಕಾರದ ಪರಿಣಾಮಕಾರಿ ಯೋಜನೆಗಳೊಂದಿಗೆ ತಾಳೆಯಾಗುವ ಮೈಕ್ರೋಫೈನಾನ್ಸ್, ತಳಮಟ್ಟದಲ್ಲಿ ಅವರನ್ನು ಬಡತನದ ಬಲೆಯಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿ, ಅವರನ್ನು ಸುಸ್ಥಿರ ಜೀವನೋಪಾಯದ ಮೇಲ್ಮುಖ ಪಥದಲ್ಲಿ ಇರಿಸಿದೆ ಎಂದು ಹೇಳಿದರು."
ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ನ ಎಂಡಿ ಶ್ರೀಯುತ ಆನಂದ್ ರಾವ್ ಮಾತನಾಡುತ್ತಾ "ಕರ್ನಾಟಕದಲ್ಲಿ, ರಾಜ್ಯದ ಗ್ರಾಮೀಣಾಭಿವೃದ್ಧಿ ಕಥೆಯ ಭಾಗವಾಗಿರುವ ಮೈಕ್ರೋ ಫೈನಾನ್ಸ್ಗಳು 20 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿವೆ. ಆರ್ಬಿಐ ನಿಯಂತ್ರಿತ ಘಟಕಗಳು ಬಲವಾದ ನೀತಿ ಸಂಹಿತೆಯಿಂದ ನಿಯಂತ್ರಿಸಲ್ಪಡುತ್ತವೆ. ಈ ವಲಯ ಎದುರಿಸುತ್ತಿರುವ ಸವಾಲುಗಳು ಬರುತ್ತಿರುವುದು ಅನಿಯಂತ್ರಿತ ಘಟಕಗಳಿಂದ" ಎಂದರು.
ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮೈಕ್ರೋ ಫೈನಾನ್ಸ್ಗಳು ಮುಖ್ಯವಾಗಿವೆ, ಏಕೆಂದರೆ ಅವು ಬಡತನದ ಅಂಚಿನಲ್ಲಿರುವ ಗುಂಪುಗಳಿಗೆ ಮತ್ತು ಅನೌಪಚಾರಿಕ ಆರ್ಥಿಕತೆಯಲ್ಲಿರುವವರಿಗೆ ಸಂಪನ್ಮೂಲಗಳು ಮತ್ತು ಬಂಡವಾಳವನ್ನು ಒದಗಿಸುತ್ತವೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರ ಮನೆಯ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ, ವ್ಯವಹಾರಗಳ ಬಗ್ಗೆ ಅವರಿಗೆ ಶಿಕ್ಷಣ ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ ಎಂದರು.
MFINE 78 ಸದಸ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (ನಿಯಂತ್ರಿತ ಸಂಸ್ಥೆಗಳು), 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಮತ್ತು 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ 721 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಾ, ಸಾಲ ಮತ್ತು ಇತರ ನಿರ್ಣಾಯಕ ಹಣಕಾಸು ಸೇವೆಗಳು ನಗರ ಮತ್ತು ಗ್ರಾಮೀಣ ಭಾರತವನ್ನು ತಲುಪುವುದನ್ನು ಖಚಿತಪಡಿಸುತ್ತವೆ. ಮೈಕ್ರೋ ಫೈನಾನ್ಸ್ ಸೇವೆಗಳ ಪ್ರಾಥಮಿಕ ಗ್ರಾಹಕರು ಕಡಿಮೆ ಆದಾಯದ ಕುಟುಂಬಗಳ 7.94 ಕೋಟಿ (ಸುಮಾರು 80 ಮಿಲಿಯನ್) ಮಹಿಳೆಯರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
MFIN (ಮೈಕ್ರೊಫೈನಾನ್ಸ್ ಇಂಡಸ್ಟ್ರಿ ನೆಟ್ವರ್ಕ್): MFIN 2014 ರಲ್ಲಿ RBI ನಿಂದ ಗುರುತಿಸಲ್ಪಟ್ಟ 1 ನೇ SRO ಆಗಿದೆ.
MFIN, ಉದ್ಯಮ ಸಂಘವಾಗಿ, NBFC-MFIಗಳು, ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (SFBs) ಮತ್ತು NBFC ಗಳನ್ನು ಒಟ್ಟುಗೂಡಿಸುತ್ತದೆ.