ಬೆಂಗಳೂರು, ಜನವರಿ 22, 2025:

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಆಲ್ ಇಂಡಿಯಾ ಬ್ಲೈಂಡ್ ಫುಟ್ಬಾಲ್ ಅಸೋಸಿಯೇಷನ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ಅಶ್ವಿನಿ ಅಂಗಡಿ ಟ್ರಸ್ಟ್ (ಆರ್) ಸ್ಥಾಪಕ ಟ್ರಸ್ಟಿಯಾದ ಅಶ್ವಿನಿ ಅಂಗಡಿ ಅವರು ಮಾತನಾಡಿದರು. 

ಅಶ್ವಿನಿ ಅಂಗಡಿ ಟ್ರಸ್ಟ್ ಮತ್ತು ಭಾರತೀಯ ಅಂಧರ ಪುಟ್ ಬಾಲ್ ಸಂಸ್ಥೆ ಸಹಯೋಗದಲ್ಲಿ ಜನವರಿ 23ರಿಂದ 26ರವರಗೆ ಅಂತರಾಷ್ಟ್ರೀಯ ಅಂಧರ ಪುರುಷರ ಮತ್ತು ಮಹಿಳೆಯರ ಪುಟ್ ಬಾಲ್ ಸೂಪ‌ರ್ ಲೀಗ್ ಪಂದ್ಯಾವಳಿಯನ್ನು ಮ್ಯಾಚ್ ಡೈ ಗೌಂಡ್ ನ್ಯೂ ಬಿ.ಇ.ಎಲ್.ರೋಡ್ ನಲ್ಲಿ ಆಯೋಜಿಸಲಾಗಿದೆ.

ಅಶ್ವಿನಿ ಅಂಗಡಿ ಟ್ರಸ್ಟ್ ಸಂಸ್ಥಾಪಕಿ, ಟ್ರಸ್ಟಿ ಅಶ್ವಿನಿ ಅಂಗಡಿರವರು ಮತ್ತು ಹಾಗೂ ಭಾರತೀಯ ಅಂಧರ ಪುಟಬಾಲ್ ಸಂಸ್ಥೆಯ ಅಧ್ಯಕ್ಷರಾದ ನಿಡೋ ಟಾಮ್ ಮತ್ತು ಅಂತರಾಷ್ಟ್ರೀಯ ಪುಟ್ ಬಾಲ್ ಕ್ರೀಡಾಪಟುಗಳು, ರೆಫರಿಗಳು ಮಾಧ್ಯಮಗೋಷ್ಠಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಆಗಿ ಅಂಗಡಿ ರವರು ಮಾತನಾಡಿ ಅಂಗ ನ್ಯೂನತೆ ಮತ್ತು ಪ್ರಪಂಚದ ಬೆಳಕನ್ನೆ ನೋಡದೇ ಛಲದಿಂದ ಬದುಕು ಕಂಡು ಸಾಮಾನ್ಯರಂತೆ ಬದುಕುವು ಛಲ ಹೊಂದಿರುವ ಇವರಿಗೆ ನಾವು ಸಾಧಿಸಿ ತೋರಿಸಬಲ್ಲವು ಎಂದು ಪುಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.

ಜನವರಿ 23ರಿಂದ 26ರವರೆಗೆ ಪುರುಷರಪುರ ಹಿಳ ಾರ ಪುಟ್ ಬಾಲ್ ಸೂಪರ್ ಲೀಗ್ ಪಂದ್ಯಾವಳಿ ಜರುಗಲಿದೆ ಮತ್ತು ಮೆಕ್ಸಿಕೊ ಮತ್ತು ಸೌತ್ ಕೊರಿಯ ಪ್ಯಾರ ಓಲಿಂಪಿಕ್ ಚಿನ್ನದ ಪದಕ ವಿಜೇತರಾದ ಪುಟ್ ಬಾಲ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಜನವರಿ 23ರಂದು ಬೆಳಗ್ಗೆ 9ಗಂಟೆಗೆ ಉದ್ಘಾಟನೆಯನ್ನು ಕನ್ನಡ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ವಿಶ್ವನಾಥ್ ಹಿರೇಮರ್ ರವರು, ಕೆ.ಎಸ್.ಡಿ.ಎಲ್.ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ್ ಮತ್ತು ಸಿ.ಕೆ.ಬಾವ ಪೊಲೀಸ್ ಅಧಿಕಾರಿ, ಎನ್.ಹೆಚ್.ಪಿ.ಸಿ.ಜನರಲ್ ಮ್ಯಾನೇಜರ್ ಗಳಾದ ಬಿ.ಡಿ.ಮಹಾರಾಣ, ರಾಜಪ್ಪನ್ ರವರು ಉದ್ಘಾಟನೆ ನೇರವೆರಿಸುವರು.

ಜನವರಿ 26ರಂದು ಸಮಾರೋಪ ಮತ್ತು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ.ಮಾಜಿ ಉಪಮುಖ್ಯಮಂತ್ರಿಗಳು, ಶಾಸಕರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್ ರವರು,ಶಾಸಕರಾದ ಎನ್.ಎ.ಹ್ಯಾರೀಸ್, ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್ ರೆಡ್ಡಿ, ಹಸಿರು ಫಾರ್ಮ್ ಸಿ.ಇ.ಓ. ಅಕ್ಷಾರ್ ಎಂ.ಎಸ್, ದೀಪಕ್ ಶಾ ಜಿ.ಐ.ಸಿ.ಸಂಸ್ಥೆಯ ಮುಖ್ಯಸ್ಥರು ಮತ್ತು ಸ್ಯಾಮ್ ಸಂಗ್ ಲೀಡರ್ ದೀಪಕ್ ಶಾ ಹಾಗೂ ಅದಾನಿ ಗ್ರೂಪ್ ಜಯರಾಮನ್ ಪುನಿಧನ್ ರವರು ಭಾಗವಹಿಸಲಿದ್ದಾರೆ.