ಜನವರಿ 14, 2025
ಬೆಂಗಳೂರಿನ ಸುದ್ಧಗುಂಟೆ ಪಾಳ್ಯದ ಮಾಜಿ ಬಿಬಿಎಂಪಿ ಸದಸ್ಯರಾದ ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ನಡೆಯಿತು.
50ಕ್ಕೂ ಹೆಚ್ಚು ಜೋಡಿ ಎತ್ತುಗಳ ಮೆರವಣಿಗೆ ನಡೆಯಿತು. ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡವರಿಗೆ ಜಿ. ಮಂಜುನಾಥ್ ಅವರು ಎಳ್ಳು - ಬೆಲ್ಲ, ಕಬ್ಬು, ಗೆಣಸು ವಿತರಣೆ ಮಾಡಿದರು.
ಸತತವಾಗಿ 6 ವರ್ಷಗಳಿಂದ ನಮ್ಮ ಸುದ್ದಗುಂಟೆಪಾಳ್ಯದಲ್ಲಿ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಮಾಡುತ್ತಿದ್ದೇವೆ ಎಂದು ಜಿ. ಮಂಜುನಾಥ ಅವರು ತಿಳಿಸಿದರು.