ಡಿಸೆಂಬರ್ 28, 2024

  ಎಫ್‌ಸಿ ಎಕ್ಸ್‌ಪೋ 2025: ಒಕ್ಕಲಿಗ ಉದ್ಯಮಿಗಳ ಸಬಲೀಕರಣಕ್ಕೆ ವಿಶಿಷ್ಟ ವೇದಿಕೆ ಸೃಷ್ಟಿಯಾಗಿದೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಏಳೆಯ ದೃಷ್ಟಿಯಿಂದ ಕಾರ್ಯಬಿರ್ವಹಿಸುತ್ತಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಫ್‌ಸಿ ಎಕ್ಸ್ಪೋ 2025ಕ್ಕೆ ಚಾಲನೆ ನೀಡಿದ್ದು, ಇದೇ ಜನವರಿ 3, 4 ಮತ್ತು 5ರಂದು ನಗರದ ಅರಮನೆ ಮೈದಾನದ ಗಾಯತ್ರಿ ಗ್ರಾಂಡ್ ಹಾಗೂ ಗಾಯತ್ರಿ ವೃಕ್ಷದಲ್ಲಿ ಆಯೋಜಿಸಿದೆ. ಈ ಮಹತ್ವದ ಕಾರ್ಯಕ್ರಮವು ಒಕ್ಕಲಿಗ ಸಮುದಾಯದ ಉದ್ಯಮಶೀಲತೆ, ಇನ್ನೊವೇಶನ್ ಮತ್ತು ನೆಟ್ವರ್ಕಿಂಗ್ ಸಹಭಾಗಿತ್ಯಕ್ಕೆ ಅತ್ಯುತ್ತಮ ವೇದಿಕೆಯಾಗಲಿದೆ.

1,800 ವರ್ಷಗಳಿಂದ ದಕ್ಷಿಣ ಕರ್ನಾಟಕದಲ್ಲಿ ಆಳವಾಗಿ ಬೇರೂರಿರುವ ಒಕ್ಕಲಿಗ ಸಮುದಾಯವು ವೈವಿಧ್ಯಮಯ ಕ್ಷೇತ್ರಗಳಲ್ಲಿ ಕೃಷಿ ಮತ್ತು ನಾಯಕತ್ವದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕರ್ನಾಟಕದ ಇತಿಹಾಸ ಮತ್ತು ಅಭಿವೃದ್ಧಿಯನ್ನು ರೂಪಿಸುವಲ್ಲಿ ಒಕ್ಕಲಿಗರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಲಾಂತರದಲ್ಲಿ ಕುವೆಂಪು, ಆದಿಚುಂಚನಗಿರಿ ಶ್ರೀಗಳಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನ ಪಡೆದು ಶಿಕ್ಷಣ, ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಆದಾಗ್ಯೂ, ಕಳೆದ ಐದು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಾದ ಬದಲಾವಣೆಯು ವ್ಯಾಪಾರ, ಆಧುನಿಕ ಕೈಗಾರಿಕೆಗಳು ಮತ್ತು ಡಿಜಿಟಲ್ ಉದ್ಯಮಗಳಲ್ಲಿ ಸೀಮಿತ ಪ್ರಾತಿನಿಧ್ಯದೊಂದಿಗೆ ಹೊಸ ಹೊಸ ಸವಾಲುಗಳನ್ನು ಸೃಷ್ಟಿಸಿದೆ. ಇಂತಹ ಸವಾಲುಗಳನ್ನ ಎದುರಿಸಿ ಪರಸ್ಪರ ಬೆಳವಣಿಗೆ ಮತ್ತು ಬೆಂಬಲ ನೀಡುವುದರೊಂದಿಗೆ ಒಕ್ಕಲಿಗ ಸಮುದಾಯದೊಳಗೆ ಉದ್ಯಮಶೀಲತೆಯನ್ನು ಉತ್ತೇಜಿಸಲು ಫಸ್ಟ್ ಸರ್ಕಲ್‌ನ್ನು 2022ರಲ್ಲಿ ಹುಟ್ಟುಹಾಕಲಾಯಿತು.

ಕರ್ನಾಟಕದಾದ್ಯಂತ 10,000 ಕ್ಕೂ ಹೆಚ್ಚು ಸಕ್ರಿಯ ಸದಸ್ಯರು ಮತ್ತು ಶಾಖೆಗಳನ್ನು ಹೊಂದಿರುವ ಫಸ್ಟ್ ಸರ್ಕಲ್ ವೃತ್ತಿಪರ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸಲಿದ್ದು ಮಾರ್ಕೆಟಿಂಗ್. ಸೋರ್ಸಿಂಗ್ ಮತ್ತು ಇನ್ನೊವೇಶನ್ ಮೂಲಕ ನೆರವು ನೀಡುತ್ತದೆ. ಈ ಬಾರಿಯ ಎಫ್‌ಸಿ ಎಕ್ಸ್‌ಪೋ 2025 ಸಮುದಾಯದ ಉದ್ಯಮಿಗಳನ್ನು ಒಟ್ಟುಗೂಡಿಸುವ ಕಾರ್ಯ ಮಾಡುತ್ತಿದೆ. ಫಸ್ಟ್ ಸರ್ಕಲ್ ಎಫಫಫ್‌ಸಿ ನೆಕ್ಸ್ ಎಂಬ ಬಹುಪಯೋಗಿ ಆ್ಯಪ್ ಸಿದ್ಧಪಡಿಸಿದ್ದು, ಇದೊಂದು ವಿನೂತನ ಹಾಗೂ ವಿಶಿಷ್ಟ ಪ್ರಯತ್ನದ್ದಾಗಿದೆ. ಆ ಮೂಲಕ ಸಮುದಾಯದ ಸಬಲೀಕರಣಕ್ಕೆ ಹೊಸ ಮುನ್ನುಡಿ ಬರೆಯಲಿದೆ.