ಡಿಸೆಂಬರ್ 27, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಛಲವಾದಿ ಮಹಾಸಭಾ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯ ಸರ್ಕಾರವು ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮುದಾಯದ ಉಪ ಜಾತಿಗಳ ದತ್ತಾಂಶವನ್ನು ಸಂಗ್ರಹಿಸಬೇಕೆಂದು 'ಛಲವಾದಿ ಮಹಾಸಭಾ'ದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಶ್ರೀಶ್ರೀಶ್ರೀ ಜಗದ್ಗುರು ಪರಮ ಪೂಜ್ಯ ಬಸವನಾಗಿದೇವ, ಬಸವರಾಜು, ಎಸ್.ಕೆ.ಶಿವಕುಮಾರ್, ನಾಗೇಶ್ ಟಿ.ಆರ್, ಸಿದ್ದರಾಜ.ಎಸ್, ಮಹಾದೇವಯ್ಯ, ಬಿ.ಎಸ್.ಪ್ರಸನ್ನ ಕುಮಾರ್ ಅವರು ಭಾಗವಹಿಸಿದ್ದರು.
08-01-2024
ಪಂಜಾಬ್ ರಾಜ್ಯ ಮತ್ತು ಇತರರು ವಿರುದ್ಧ ದಾವಿಂದರ್ ಸಿಂಗ್ ಮತ್ತು ಇತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇತೃತ್ವದ 07 ನ್ಯಾಯಾಧೀಶರ ಒಳಗೊಂಡ ಸಂವಿಧಾನ ಪೀಠವು 6:1 ಅನುಪಾತದಲ್ಲಿ ರಾಜ್ಯಗಳಿಗೆ ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿಯ ವರ್ಗೀಕರಣವನ್ನು ಮಾಡಬಹುದೆಂದು ಸಲಹೆ ನೀಡಿದೆ.ನಾವು ಆದಿ ದ್ರಾವಿಡ ಸಮಾಜದವರು ದಾವಿಂದರ್ ಸಿಂಗ್ ಮತ್ತು ಇತರರ ಪ್ರಕರಣದಲ್ಲಿ ನೀಡಿದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತ ಮಾಡುತ್ತೇವೆ.
10-28-2024
ನಮ್ಮ ರಾಜ್ಯದ ಸಚಿವ ಸಂಪುಟವು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ದಿನಾಂಕ 01.08.2024 ರಂತೆ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ-ಜಾತಿ ಸೇರಿದವರ ಪ್ರಾತಿನಿಧ್ಯತೆ ಕುರಿತು ದತ್ತಾಂಶ ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಆಯೋಗ ವಿಚಾರಣೆ ಕಾಯ್ದೆ 1952 ರ ಅಡಿ ಮಾನ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಲು ಅನುಮೋದಿಸಿದೆ.
12-11-2024
ನಮ್ಮ ರಾಜ್ಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್. ನಾಗಮೋಹನ್ ದಾಸ್ ಇವರ 'ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ ಮತ್ತು ದಿನಾಂಕ 03.12.2024 ರಂದು ಸದರಿ ಆಯೋಗದ ಸಂಚಾಲಕರಾಗಿ ಮತ್ತು ಅಪರ ನಿರ್ದೇಶಕರು, ಇಂದಿರಾಗಾಂಧಿ ವೃತ್ತಿ ತರಬೇತಿ ಕೇಂದ್ರ (ಶ್ರೀಮತಿ ಸತ್ಯಶ್ರೀ.ಆರ್) ಇವರನ್ನು ಆಯೋಗದ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ವಿಷಯವು ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬದಿಸಿದೆ ಮತ್ತು ಸಂವಿಧಾನದ ಅನುಚ್ಛೇದ 341 ರ ವ್ಯಾಪ್ತಿಗೆ ಬರುತ್ತದೆ. ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್.ನಾಗಮೋಹನ್ ದಾಸ್ ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಮತ್ತು ಸದರಿಯವರು ಸಂವಿಧಾನದ ಅನುಚ್ಛೇದ 340 ರ ವ್ಯಾಪ್ತಿಗೆ ಸೇರಿರುತ್ತಾರೆ. ಇವರು ನಮಗೆ ನ್ಯಾಯ ಮಾಡುತ್ತಾರೆಂದು ನಮಗೆ ನಂಬಿಕೆ ಇಲ್ಲ. ಅದಲ್ಲದೆ ಮಾದಿಗ ಮತ್ತು ಛಲವಾದಿ ಸಮಾಜದವರು ಹಳೆ ಮೈಸೂರು, ಬಳ್ಳಾರಿ, ಹೊಸಪೇಟೆ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮತ್ತು ಕೊಳ್ಳೆಗಾಲ ತಾಲ್ಲೂಕಿನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳು ಪಡೆದುಕೊಂಡಿರುತ್ತಾರೆ. ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್. ನಾಗಮೋಹನ್ ದಾಸ್ ರವರಿಗೆ ಆದಿ ಕರ್ನಾಟಕ, ಆದಿ ದ್ರಾವಿಡ, ಮತ್ತು ಆದಿ ಆಂದ್ರ ಉಪ-ಜಾತಿಗಳಲ್ಲಿ ಮಾದಿಗ ಮತ್ತು ಛಲವಾದಿ ಸಮಾಜದವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಮತ್ತು ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಸಮಿತಿಯು ಮಾಲ ಉಪ- ಜಾತಿಯನ್ನು ಅಲೆಮಾರಿ ಗುಂಪಿಗೆ ಸೇರಿಸಿದೆ. ಈ ಕಾರಣಗಳಿಂದ ನಾವು ಈ ಸುದ್ದಿಗೋಷ್ಠಿಯ ಮುಖಾಂತರ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಒತ್ತಾಯ ಮಾಡುವುದೇನೆಂದರೇ ಮಾನ್ಯ ಎಚ್.ಎನ್. ನಾಗಮೋಹನ್ ದಾಸ್ ಆಯೋಗಕ್ಕೆ ಛಲವಾದಿ ಮಹಾಸಭಾ(ರಿ) ರಾಜ್ಯಾಧ್ಯಕ್ಷರಾದ ಶ್ರೀಮತಿ ವಾಣಿ ಕೆ.ಶಿವರಾಮು ಹಾಗೂ ಮಾದಿಗ, ಲಂಬಾಣಿ, ಭೋವಿ,ಕೊರಚ, ಕೊರಮ ಮತ್ತು ಇತರೆ ಪರಿಶಿಷ್ಟ ಜಾತಿಯ ತಲಾ ಸಮುದಾಯದ ಒಂದು ಪ್ರತಿನಿಧಿಯನ್ನು ಸದರಿ ಆಯೋಗಕ್ಕೆ ಸದಸ್ಯರನ್ನಾಗಿ ನೇಮಕ ಮಾಡಬೇಕು. ಮಾಡದೆ ಹೋದಲ್ಲಿ Principle of Natural Justice ಉಲ್ಲಂಘನೆಯಾಗುತ್ತದೆ.