ಅಕ್ಟೋಬರ್ 17, 2024 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024 - 2029ನೇ ಅವಧಿಗೆ 27.12.2024ರಂದು ರಾಜ್ಯಾಧ್ಯಕ್ಷ ಹಾಗೂ ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

 ರಾಜ್ಯದ ವಿವಿಧ ವೃಂದ ಸಂಘಗಳು ಮತ್ತು ರಾಜ್ಯ ಸರ್ಕಾರಿ NPS ನೌಕರರ ಸಂಘ ಹಾಗೂ ತಾಲೂಕು ಮುಖಂಡರುಗಳ ಒತ್ತಾಸೆಯ ಮೇರೆಗೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ವತಿಯಿಂದ ಅಧ್ಯಕ್ಷ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಹಾಗೂ ಖಜಾಂಚಿಯಾಗಿ ವಿವಿ ಶಿವರುದ್ರಯ್ಯ ಅವರನ್ನು ಸ್ಪರ್ದಾಳುಗಳಾಗಿ ಆಯ್ಕೆ ಮಾಡಲಾಗಿದೆ. 

 ಈ ಬಗ್ಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಅಭ್ಯರ್ಥಿಯಾದ ಕೃಷ್ಣಮೂರ್ತಿ ಹಾಗೂ ಖಜಾಂಚಿಯಾಗಿ ವಿ.ವಿ. ಶಿವರುದ್ರಯ್ಯ ಅವರು ಮಾತನಾಡಿದರು. 

  ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹಾಗೂ ವಿ.ವಿ. ಶಿವರುದ್ರಯ್ಯ ಅವರ ಬೆಂಬಲಿಗರು ಹಾಜರಿದ್ದರು.