December 26, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ರಿ) ಜಾಮರಾಜಪೇಟೆ ಘಟಕದ ಅಧ್ಯಕ್ಷರಾದ ಚಾಂದ್ ಪಾಷ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಚಾಂದ್ ಪಾಷ ಅವರು ಮಾತನಾಡಿದರು.
ಬೆಂಗಳೂರಿನ ಥಣಿಸಂದ್ರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಅನಧಿಕೃತ ಶಾಲೆಯಾಗಿದೆ, ಆ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಚಾಂದ್ ಪಾಷ ಅವರು ಒತ್ತಾಯಿಸಿದರು.
ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ(ನಿರ್ವಹಣೆ: "ದಿ ಅಲ್- ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ರವರು ಭಾರತ ವಿರೋಧಿ ಚಟುವಟಿಕೆಗಳಾದ, ತೆರಿಗೆ ವಂಚನೆ, ನಕಲಿ ದಾಖಲೆ ಸೃಷ್ಟಿ, ಅಪರಾಧ ವಂಚನೆ, ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ನಂಬಿಕೆಯ ಉಲ್ಲಂಘನೆ ಮಾಡುತ್ತಿದ್ದು, ಹಾಗೂ ನೋಂದಣಿಯಾಗದಿರುವ ಎಜುಕೇಷನ್ ಸೊಸೈಟಿಯಾದ "ಅಲ್-ಜಾಮಿಯಾ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ" ಮತ್ತು "ಜಾಮಿಯಾ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ" ಎಂದು ಮೊಸಗೊಳಿಸುತ್ತಿರುವುದರ ಬಗ್ಗೆ ದೂರು ಹಾಗೂ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ.
1. ಈ ಶಾಲೆಯವರು ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆ(ನಿರ್ವಹಣೆ: "ದಿ ಅಲ್- ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ಎಂಬ ನಾಮಫಲಕ ಅಳವಡಿಸಿದ್ದು ಜೊತೆಗೆ "ಜಾಮೀಯಾ ಮೊಹಮ್ಮದೀಯಾ ಮಂನ್ಸೂರ(ಒಡೆತನ: ಅಲ್- ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ಮತ್ತು ಸಾಮರ್ ಅಂತರಾಷ್ಟ್ರೀಯ ಶಾಲೆ(ನಿರ್ವಹಣೆ: “ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ಎಂದು ನಾಮಫಲಕ ಅಳವಡಿಸಿದ್ದು, ಈ ಶಾಲೆಯನ್ನು ಯಾವ ಎಜುಕೇಷನ್ ಸೊಸೈಟಿ ನಡೆಸುತ್ತಿದೆ ಎಂದು ಅನುಮಾನವಿದ್ದು ತಾವುಗಳು ಇವರನ್ನು ಕರೆಸಿ ಇವರು ಯಾವ ಎಜುಕೇಷನ್ ಸೊಸೈಟಿಯವರು ಮತ್ತು ಇವರ ಎಜುಕೇಷನ್ ಪತ್ರ ಪರಿಶೀಲಿಸುವಂತೆ ಕೇಳಿಕೊಳ್ಳುತ್ತೇನೆ. ಸೊಸೈಟಿ ನೋಂದಣಿ
2. ಹಾಗೂ ಈ ಶಾಲೆಯವರ ವಿರುದ್ಧ ಕೊತ್ತನೂರು ಪೋಲೀಸ್ ಠಾಣೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಾಗಿದ್ದು, ಇವರಿಗೆ ಇರುವ ಅನ್ಯ ವ್ಯಕ್ತಿಗಳ ಪ್ರಭಾವ ಬಳಸಿಕೊಂಡು ಈ ಪ್ರಕರಣವನ್ನು ಮುಚ್ಚಿಹಾಕಿರುತ್ತಾರೆ.
3. ಈ ಶಾಲೆಯವರು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ(ನಿರ್ವಹಣೆ: "ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ಎಂಬ ಹೆಸರಿನಲ್ಲಿ ಮತ್ತು 'ಜಾಮೀಯಾ