ಡಿಸೆಂಬರ್ 23, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಂಬೇಡ್ಕರೈಟ್ ಯೂತ್ಸ್ ಫೆಡೆರೇಷನ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಬೆಂಗಳೂರಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ 'ಅಂಬೇಡ್ಕರೈಟ್ ಯೂತ್ಸ್ ಕಾನ್ಫರೆನ್ಸ್  -2024' ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇದೇ ತಿಂಗಳ ಡಿಸೆಂಬರ್ 25, 2024 ರಂದು ಬೆಳಿಗ್ಗೆ 11 ಗಂಟೆಗೆ, ಅಂಬೇಡ್ಕರೈಟ್ ಯೂತ್ಸ್ ಫೆಡರೇಷನ್ ವತಿಯಿಂದ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಫರೆನ್ಸ್  -2024 ಎಂಬ ಕಾರ್ಯಕ್ರಮವನ್ನು ಶೋಷಿತ ಬಹುಜನ ಸಮುದಾಯಗಳಾದ ಎಸ್ಸಿ ಎಸ್ಪಿ ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿ ಯುವಜನತೆಯ ಸಮಕಾಲಿನ ಸಮಸ್ಯೆಗಳು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರು ತೋರಿದ ಪರಿಹಾರದ ಮಾರ್ಗಗಳು ಎಂಬ ವಿಷಯದ ಮೇಲೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಮಂತ್ರಿಗಳಾದ ಸಂತೋಷ್ ಲಾಡ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಹಿರಿಯ ಚಲನಚಿತ್ರ ನಾಯಕರ ನಟರಾದ ಶ್ರೀ ಅಶೋಕ್ ರವರು ವಹಿಸಲಿದ್ದು, ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ದಕ್ಷಿಣ ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಪಾ. ರಂಜಿತ್ ಆಗಮಿಸಲಿದ್ದು, ನಾಡಿನ ಖ್ಯಾತ ಅಂಬೇಡ್ಕರ್ ವಾದಿಗಳಾದ ಡಾ. ಹ.ರಾ. ಮಹೇಶ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ದೇಶ ಮತ್ತು ಹಕ್ಕೊತ್ತಾಯವನ್ನು ಮಂಡನೆಯನ್ನು ನಾಡಿನ ಯುವ ಲೇಖಕರು ಹಾಗೂ ಅಂಬೇಡ್ಕರೈಟ್ ಯೂತ್ ಫೆಡರೇಷನ್ ಸಂಚಾಲಕರಾದ ರುದ್ರು ಪುನೀತ್ ಮಂಡಿಸಲಿದ್ದು, ಕಾರ್ಯಕ್ರಮದ ದಿಕ್ಕೂಚಿ ನುಡಿಗಳನ್ನು ಬಹುಜನ ಚಳುವಳಿಯ ಯುವ ಚಿಂತಕರು ಹಾಗೂ ಅಂಬೇಡ್ಕರೈಟ್ ಯೂತ್ ಫೆಡರೇಷನ್‌ನ ರಾಜ್ಯಪ್ರಧಾನ ಸಂಚಾಲಕರಾದ ಡಾ. ಸುರೇಶ್ ಗೌತಮ್ ಮಂಡಿಸಲಿದ್ರೂ, ನಾಡಿನ ಎಲ್ಲ ಜಿಲ್ಲೆಗಳಿಂದ ಹಲವು ಜನ ಖ್ಯಾತ ಅಂಬೇಡ್ಕರ್ ವಾದಿಗಳು ಭಾಗವಹಿಸುತ್ತಿದ್ದಾರೆ. ಸುಮಾರು ಎರಡು ಸಾವಿರ ಜನ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ 18 ಜನರಿಗೆ ರಾಜ್ಯಮಟ್ಟದ ಅಂಬೇಡ್ಕರೈಟ್ ಅವಾರ್ಡ್ ಪ್ರದಾನ ಮಾಡುತ್ತಿದ್ದು (ಲಕ್ಷಣ ರೆಡ್ಡಿ, ಬಿ.ಕೆ. ಉದಯ್ ಕುಮಾರ್, ಡಾ. ಮಂಜುನಾಥ್, ಪುಷ್ಪಲತ, ಪಿ. ಶೇಷಾದ್ರಿ, ಹರೀಶ್ ಸಿ.ಎಂ. ಅನೀಲ್ ಕುಮಾರ್, ಮಹೇಶ್ ಭರಣಿ, ಮಹ್ಮದ್ ಮೇತ್ರಿ, ಕುಮಾರ್ ಹೆಚ್.ಪಿ, ಬಿ.ಆರ್.ಭಾಸ್ಕರ್ ಪ್ರಸಾದ್, ಡಾ. ರಾಜನಾಯ್, ಎ.ಸಿ. ಚಿಕ್ಕಣ್ಣ, ಹನಸೋಗೆ ಸೋಮಶೇಖರ್, ಕೃಷ್ಣಮೂರ್ತಿ ಚಮರಂ, ಯಶೋಧ ಪಿ, ತುಂಬಲ ರಾಮಣ್ಣ, ಹರ್ಷಕುಮಾರ್ ಕುಪ್ಪೆ) ಜೊತೆಗೆ ನಾಡಿನ ಪ್ರಸಿದ್ದ ವಿಚಾರವಾದಿಗಳಿಂದ ಬಾಬಾ ಸಾಹೇಬರನ್ನು ಕುರಿತು ಚಿಂತನ -ಮಂಥನ ಕಾರ್ಯಕ್ರಮ ನೆರವೇರಲಿದೆ.

ಹಕ್ಕೊತ್ತಾಯಗಳು:

1. ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ದೊರೆಯುವಂತೆ ವಿದ್ಯಾರ್ಥಿನಿಲಯಗಳ ಸಂಖ್ಯೆ ಮತ್ತು ಕಟ್ಟಡಗಳ ವಿಸ್ತಾರವನ್ನು ಹೆಚ್ಚಿಸಬೇಕು.

2. ವಿದ್ಯಾರ್ಥಿವೇತನ ಪಡೆಯಲು SC/ST ವಿದ್ಯಾರ್ಥಿಗಳ ಪೋಷಕರಿಗೆ ನಿಗಧಿಗೊಳಿಸಿರುವ ಆದಾಯಮಿತಿಯನ್ನು ಹೆಚ್ಚಿಸಬೇಕು. ಮತ್ತು ವಿದ್ಯಾರ್ಥಿವೇತನ ಹಾಗು ಪ್ರೋತ್ಸಾಹ ಧನವನ್ನು ದ್ವಿಗುಣಗೊಳಿಸಬೇಕು. ಸಕಾಲಕ್ಕೆ ವಿತರಿಸಬೇಕು.

3. ಹಾಸ್ಟೆಲ್ ವಿದ್ಯಾರ್ಥಿಗಳ ದಿನಭತ್ಯೆಯನ್ನು ದ್ವಿಗುಣಗೊಳಿಸಬೇಕು.

4. ಹಾಸ್ಟೆಲ್ ಗಳಲ್ಲಿ ಪ್ರತ್ಯೇಕ ಸುಸಜ್ಜಿತ ಮತ್ತು ಸರ್ವಸೌಲಭ್ಯವಿರುವ 'ಓದುವಮನೆ' ಗ್ರಂಥಾಲಯ ಮತ್ತು ಧ್ಯಾನಮಂದಿರಗಳನ್ನು ನಿರ್ಮಿಸಬೇಕು.

5. ವಿದ್ಯಾರ್ಥಿನಿಲಯಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳು, ಕೆರೀರ್ ಗೈಡೆನ್ಸ್, ಪ್ರಮಾಣೀಕೃತ ವೃತ್ತಿಪರ ತರಬೇತಿಗಳು, ವಿದೇಶವ್ಯಾಸಂಗದ ಬಗ್ಗೆ ಅರಿವು, ಸ್ವಯಂ ಉದ್ಯೋಗಕ್ಕಿರುವ ಅವಕಾಶಗಳು, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮುಂತಾದವುಗಳನ್ನು ಪ್ರಾರಂಭಿಸಬೇಕು.