ಡಿಸೆಂಬರ್ 18, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಆಮ್ ಅಮ್ಮಿ ಪಾರ್ಟಿ-ತುಮಕೂರು' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಎನ್. ರಾಮಾಂಜಿನಪ್ಪ ಅವರು ಮಾತನಾಡಿದರು. 

 ಪಾವಗಡ ಶಾಸಕರಾದ ಹೆಚ್.ವಿ ವೆಂಕಟೇಶ್ ಅವರು ಅಕ್ರಮವಾಗಿ 21 ಎಕರೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಎನ್. ರಾಮಾಂಜಿನಪ್ಪ ಅವರು ಆರೋಪಿಸಿದರು.

ತುಮಕೂರು ಜಿಲ್ಲೆ, ಪಾವಗಡ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೇಸ್ ಶಾಸಕರು ಆದ ಶ್ರೀ ಹೆಚ್.ವಿ ವೆಂಕಟೇಶ್ ರವರು 5-00 ಎಕರೆ ಬದಲು 21 ಎಕರೆ 31 ಗುಂಟೆ ಹೆಚ್ಚುವರಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಾ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಸುಮಾರು 50 ಕೋಟಿ ರೂಪಾಯಿಗಳಿಗೂ ಹೆಚ್ಚು ಸರ್ಕಾರದ ಬೊಕ್ಕಸಕ್ಕೆ ವಂಚಿಸಿ ನಷ್ಟ ಮಾಡಿದ್ದಾರೆಂದು ಆರೋಪಿಸಿದರು. 

ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು, ವೈ.ಎನ್.ಹೊಸಕೋಟೆ ಹೋಬಳಿ, ತಿಪ್ಪಯ್ಯನದುರ್ಗ ಗ್ರಾಮದ ಸರ್ವೆ ನಂ. 42 ರಲ್ಲಿ ಒಟ್ಟು 32 ಎಕರೆ 31 ಗುಂಟೆ ಪೈಕಿ ಕೇವಲ 5-00 ಎಕರೆ ಪ್ರದೇಶದಲ್ಲಿ ಮಾತ್ರ ಕಟ್ಟಡದ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮೇ। ವೆಂಕಟೇಶ್ವರ ಸ್ಟೋನ್ ಕ್ರಷರ್ (ಕಲ್ಲುಗಣಿ ಗುತ್ತಿಗೆ ಸಂಖ್ಯೆ 826) ರವರಿಗೆ 2014 ರಲ್ಲಿ ಗುತ್ತಿಗೆ ಅನುಮತಿ ಪಡೆದುಕೊಂಡಿರುವುದು ಸರಿಯಷ್ಟೆ.

1) ಮುಂದುವರೆದು ಇದೇ ಸರ್ವೆ ನಂ.42 ರಲ್ಲಿರುವ ಒಟ್ಟು 32 ಎಕರೆ 31 ಗುಂಟೆ ಪೈಕಿ ಸುಮಾರು 21 ಎಕರೆ 31 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಿಕೊಂಡು ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಮಂತ್ರಿಗಳು ಆದ ಶ್ರೀ ವೆಂಕಟರಮಣಪ್ಪ ಮತ್ತು ಅವರ ಮಗನಾದ ಹೆಚ್.ವಿ.ವೆಂಕಟೇಶ್ ಹಾಲಿ ಶಾಸಕರು ಹಾಗೂ ಶ್ರೀಮತಿ ಶಶಿಕಲಾ ಕೋಂ ಹೆಚ್.ವಿ.ವೆಂಕಟೇಶ್ ರವರುಗಳು ರಾಜಕೀಯ ಪ್ರಭಾವಿಗಳಾಗಿದ್ದು ಅಧಿಕಾರ ದುರುಪಯೋಗ ಮಾಡಿಕೊಂಡು ಕಾನೂನು ಕಟ್ಟಳೆಗಳನ್ನ ಗಾಳಿಗೆ ತೂರಿ ಸುಮಾರು 21-31 ಎಕರೆ ಸರ್ಕಾರದ ಜಮೀನಿನಲ್ಲಿ ಅನಧಿಕೃತವಾಗಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ರಾಜಾ ರೋಷವಾಗಿ ನಡೆಸುತ್ತಾ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಸುಮಾರು 50 ಕೋಟಿಗೂ ಹೆಚ್ಚು ನಷ್ಟ ಉಂಟುಮಾಡುತ್ತಿರುವ ಬಗ್ಗೆ ಈ ಕೆಳಕಂಡಂತೆ ಅಂಕಿ ಅಂಶಗಳಲ್ಲಿ ವಿವರಿಸಿರುತ್ತೇನೆ.

23/2831. ದಿ:29/9/22ರ ಉಪ ನಿರ್ದೇಶಕರ ಕಛೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತುಮಕೂರು ರವರ ನೋಟೀಸ್ ರಂತೆ ಅಕ್ರಮ ಅವ್ಯವಹಾರ ಕಾನೂನು ಉಲ್ಲಘಂನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಇದಕ್ಕೆ ಸಂಬಂಧಿಸಿದ ದಾಖಲೆ Annexure No. 3, ಎಂಬುದಾಗಿ ಗುರ್ತಿಸಿ ಲಗತ್ತಿಸಿದೆ.

5) ನಿರ್ದೇಶಕರು ರವರಿಗೆ ದಿ:14/10/22 ರಂದು ಮತ್ತು ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರಿಗೆ ದಿ:7/9/22 ರಂದು ಮತ್ತು ತುಮಕೂರು ಜಿಲ್ಲಾಧಿಕಾರಿಗಳಿಗೆ ಅನಧಿಕೃತ ಒತ್ತುವರಿ ಮತ್ತು ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದಿನಾಂಕ:07/11/22 ರಂದು ಲಿಖಿತವಾಗಿ ದೂರು ನೀಡಿದ್ದರೂ ಸಹ ಸಂಬಂದಪಟ್ಟ ಅಧಿಕಾರಿಗಳು ಶಾಮೀಲಾಗಿ ಖನಿಜ ಸಂಪತ್ತು ಸಂರಕ್ಷಣೆ ಮಾಡುವ ಬದಲು ಕ್ರಮ, ಅವ್ಯವಹಾರಕ್ಕೆ ಸಹಕರಿಸುತ್ತಾ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿ ಕರ್ತವ್ಯಲೋಪ/ದುರ್ವತ್ರನೆ ಎಸಗಿ ಶಾಸಕರು ಮತ್ತು ಅವರ ಕುಟುಂಬದವರು ನಡೆಸುತ್ತಿರುವ ಅನಧಿಕೃತ ಅಕ್ರಮ, ಅವ್ಯವಹಾರದ ಮೂಲಕ ಕಲ್ಲು ಗಣಿಗಾರಿಕೆ ನಡೆಸಲು ಮತ್ತು ಖನಿಜ ಸಂಪತ್ತನ್ನು ಲೂಟಿ ಮಾಡಲು ಸಹಕಾರ ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿರುತ್ತದೆ.

6) ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗುವ ಗುಂಡಿಗಳಲ್ಲಿ ಜನ-ಜನುವಾರು ಬಿದ್ದು ಸಾವುನೋವು ಸಂಬವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲ್ಲುಗಣಿಗಾರಿಕೆ ಗುತ್ತಿಗೆ ಪ್ರದೇಶದ ಸುತ್ತಲೂ ಗುತ್ತಿಗೆ ಕರಾರು ಪುಸ್ತಕದ ಭಾಗ 7ರ ಕಂಡಿಕೆ 5 ರಂತೆ ತಂತಿ ಬೇಲಿ ಅಥವಾ ತಡೆಗೋಡೆ ನಿರ್ಮಿಸಿರುವುದಿಲ್ಲ ಮತ್ತು ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ರಾಜಕೀಯ ಅಧಿಕಾರದ ಪ್ರಭಾವದಿಂದ ನಿರ್ಲಕ್ಷಿಸುತ್ತಿರುವ ಬಗ್ಗೆ ದಾಖಲೆ

ಅನುಬಂಧ ಸಂಖ್ಯೆ 4. 2

7) ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕರ್ನಾಟಕ ರಾಜ್ಯ ಪರಿಸರ ಅಘಾತ ಅಂದಾಜೀಕರಣ ಪ್ರಾಧಿಕಾರದಿಂದ ಜಾರಿಯಾದ ವಿಮೋಚನಾ ಪತ್ರದಲ್ಲಿ ವಿಧಿಸಿರುವ ಕ್ರಮ ಸಂಖ್ಯೆ 1 ರಿಂದ 22 ವರೆಗಿನ ನಿರ್ಧಿಷ್ಟ ಕಡ್ಡಾಯ ಷರತ್ತುಗಳನ್ನು ಪಾಲಿಸದೆ ನಿರ್ಲಕ್ಷಿಸಿ ಕಾನೂನು ಕಟ್ಟಳೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಉಲ್ಲಂಘಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆ Annexure No.5 ಎಂಬುದಾಗಿ ಗುರ್ತಿಸಿ ಲಗತ್ತಿಸಿದೆ.

8) 2014 ರಿಂದ 2019 ನೇ ಸಾಲಿನ ವರೆಗೂ ರಾಜಧನ ಮತ್ತು ದಂಡ ಪಾವತಿಸದೆ ಸರ್ಕಾರಕ್ಕೆ ಬಾಕಿ ಇದ್ದರೂ ಸಹ ರಾಜಕೀಯ ಪ್ರಭಾವ ಬಳಸಿ 2019ನೇ ಸಾಲಿನಲ್ಲಿ 30 ವರ್ಷಗಳ ಲೀಸ್ ಸಮಯವನ್ನು 30 ವರ್ಷಗಳ ಅವಧಿಗೆ ವಿಸ್ತರಣೆ ಮಾಡಿ ಸರ್ಕಾರದ ಬೋಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆ Annexure No.6 ಎಂಬುದಾಗಿ ಗುರ್ತಿಸಿ ಲಗತ್ತಿಸಿದೆ.

9) ಮುಂದುವರೆದು: ಮೇ।। ವೆಂಕಟೇಶ್ವರ ಸ್ಟೋನ್ ಕ್ರಷರ್ ರವರಿಗೆ 2014 ನೇ ಸಾಲಿನಲ್ಲಿ ಕಲ್ಲುಗಣಿ ಗುತ್ತಿಗೆ ಪಡೆದುಕೊಂಡ ದಿನದಿಂದ 2022-23 ನೇ ಸಾಲಿನವರೆಗೆ ರಾಜಧನ ಮತ್ತು ದಂಡ 10,28,87,715/-(ಹತ್ತು ಕೋಟಿ ಇಪ್ಪತ್ತೆಂಟು ಲಕ್ಷ ಎಂಬತ್ತೇಳು ಸಾವಿರ ಏಳುನೂರು ಹದಿನೈದು) ರೂಪಾಯಿಗಳು ರಾಜಧನ ಮತ್ತು ದಂಡದ ಮೊತ್ತವನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆ Annexure No.7 ಎಂಬುದಾಗಿ ಗುರ್ತಿಸಿ ಲಗತ್ತಿಸಿದೆ.