ಡಿಸೆಂಬರ್ 17, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕರಾದ ಎ.ಹೆಚ್. ಬಸವರಾಜು ಅವರು ಮಾತನಾಡಿದರು.
ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ "ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ " ಆಶ್ರಯದಲ್ಲಿ 26ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಈ ವರ್ಷವು ಸಹ ಏರ್ಪಡಿಸಿದ್ದ, ದಿನಾಂಕ: 23/02/2025 ಭಾನುವಾರದಂದು ನಡೆಸುಲ ವೇದಿಕೆಯ ತೀರ್ಮಾನಿಸಿದೆ.
ಕಳೆದ ಇಪ್ಪತ್ತೈದನೇ ( 25 ) ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ವೇದಿಕೆಯು ಆಚರಿಸಿಕೊಂಡು ಬಂದಿದ್ದು ಈ ಬಾರಿಯು ಸಹ ಅದೇ ರೀತಿ ಸಾಮೂಹಿಕ ವಿವಾಹವನ್ನು ನಡೆಸಲು ವೇದಿಕೆಯು ಉತ್ಸುಕವಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸರಿ ಸುಮಾರು 1511 ಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ.
ಬಡವರು, ಹಿಂದುಳಿದ ವರ್ಗಗಳ ಜನರಿಗೆ ವಿವಾಹವು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವುದನ್ನು ವೇದಿಕೆಯು ಮನಗಂಡು ಶ್ರೀ ಬನಶಂಕರಿ ಅಮ್ಮನವರ ಆಶೀರ್ವಾದ ಪಡೆದು ಅಂತಹ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ವಿವಾಹ ನಡೆಸುವ ಸಂಬಂಧಕ್ಕಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತ್ತು.
1999ರಲ್ಲಿ ವೇದಿಕೆಯು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು. ಆರಂಭದ ವರ್ಷದಲ್ಲಿ 41 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶಿಸಿದವು. ಇದರಿಂದ ಪ್ರೇರಣೆಗೊಂಡ ವೇದಿಕೆಯು ಇಂತಹ ಧಾರ್ಮಿಕ, ಸಾಮೂಜಿಕ ಕಾಳಜಿ ಪರ ಕಾರ್ಯಕ್ರಮವನ್ನು ಪ್ರತೀ ವರ್ಷವು ಸಹ ಮುಂದುವರೆಸುವ ಸಂಕಲ್ಪ ಮಾಡಿ ಅದರ ಪರಿಣಾಮ ಇದೀಗ ' ಇಪ್ಪತ್ತಾರನೇ (26) ವರ್ಷಕ್ಕೆ ಕಾಲಿರಿಸಲು ಕಾರಣವಾಯಿತು.
ಈ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕರಾದ ಎಸ್.ಕೆ. ನಟರಾಜ್, ಜೆ.ಆರ್. ದಾಮೋದರ್ ನಾಯ್ತು, ಹೆಚ್. ಕೆ. ಮುತ್ತಪ್ಪ, ಆರ್. ನಾರಾಯಣ ಸ್ವಾಮಿ, ಸಿ. ಮುತ್ತಪ್ಪ ಅವರು ಉಪಸ್ಥಿತರಿದ್ದರು.