ಡಿಸೆಂಬರ್ 13, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಚಂದ್ರಶೇಖರ್ ಜಿಮ್ನಾಸ್ಟಿಕ್ ಅಕಾಡೆಮಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
2024-25ನೇ ಸಾಲಿನ ಶಿಕ್ಷಣ ಇಲಾಖೆಯ (ಪದವಿಪೂರ್ವ ಕಾಲೇಜು) ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಕ್ರೀಡಾ ಕೂಟದಲ್ಲಿ ದೀಕ್ಷಾ ಗಿನ್ನೀಸ್ ಗಿರೀಶ್, ಚಿರಂತ್.ವಿ. ಶೆಟ್ಟಿ ರವರು ವಿಜೇತರಾಗಿದ್ದಾರೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಶಾಲಾ ಶಿಕ್ಷಣ (ಪದವಿ ಪೂರ್ವ ಕಾಲೇಜು) ಇಲಾಖಾ ವತಿಯಿಂದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಯನ್ನು ನಗರದ ಗೋಪಾಲನ್ ಶಾಲೆಯಲ್ಲಿ ಆಯೋಜಿಸಿದ್ದು, ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ಗಿರೀಶ್ ರವರು ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ 4 ವಿಭಾಗಗಳಲ್ಲಿ 3. ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಟೇಬಲ್ ಓಲ್ಸ್ನಲ್ಲಿ – ಪ್ರಥಮ, ಪ್ಲೋರ್ ಎಕ್ಸಸೈಸ್ ಪ್ರಥಮ, ಅನ್ ಇವನ್ ಬಾರ್ ನಲ್ಲಿ ಪ್ರಥಮ, ಬ್ಯಾಲೆನ್ಸ್ ಬೀಮ್ ನಲ್ಲಿ - ದ್ವೀತಿಯ ಸ್ಥಾನವನ್ನು ಪಡೆದು ವೀರಗ್ರಹಿಣಿಯಾಗಿದ್ದಾರೆ.
ಅದೇ ರೀತಿ ಆರ್.ಎನ್.ಎಸ್ ಬಂಟ್ಸ್ ಕಾಂಪೋಸಿಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆದ ಚಿರಂತ್.ವಿ. ಶೆಟ್ಟಿ ರವರು ಬಾಲಕರ ವಿಭಾಗದಲ್ಲಿ ಪ್ಲೋರ್ ಎಕ್ಸಸೈಸ್ - ಪ್ರಥಮ, ಹೈಬಾರ್ನಲ್ಲಿ – ಪ್ರಥಮ, ಟೇಬಲ್ - ತೃತೀಯ ಸ್ಥಾನವನ್ನು ಪಠ ಸ್ಥಾನವನ್ನು ಪಡೆದಿರುತ್ತಾರೆ.
ಈ ಮೇಲ್ಕಂಡಂತೆ ಈ ಇಬ್ಬರು ಭಾರತೀಯ ನಿವೃತ್ತ ಹಿರಿಯ ತರಬೇತುದಾರರಾದ ಚಂದ್ರಶೇಖರ್, ಶ್ರೀ ಚಂದ್ರಶೇಖರ್ ಜಿಮ್ನಾಸ್ಟಿಕ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.