ಡಿಸೆಂಬರ್ 13, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ನಮ್ಮ ಕರ್ನಾಟಕ ಸೇನೆ' ಸಂಘಟನೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಎಂ. ಬಸವರಾಜ ಪಡುಕೋಟೆ ಅವರು ಮಾತನಾಡಿದರು.
ರಾಜ್ಯದಲ್ಲಿ ರಮ್ಮಿ ಸರ್ಕಲ್ ಸೇರಿದಂತೆ ಇತರೆ ಫ್ಯಾಂಟಸಿ ಆಟಗಳನ್ನು ನಿಷೇಧೀಸಬೇಕೆಂದು ಎಂ. ಬಸವರಾಜ ಪಡುಕೋಟೆ ಅವರು ಒತ್ತಾಯಿಸಿದರು.
ವಿಷಯ: ಕಾನೂನು ಅನುಮತಿಸಿದ (FANTASY GAMES) ಮತ್ತು ಅಕ್ರಮ ಜಾಲತಾಣಗಳ(SKILL GAME) ಆಟವಾಡಿ, ಆಟದ ವ್ಯಸನಿಗಳಾಗಿ ನಮ್ಮ ಭಾರತದ ಜನತೆ ಅದರಲ್ಲೂ ವಿದ್ಯಾರ್ಥಿಗಳು, ಯುವಕರು, ಉದ್ಯೋಗಿಗಳು ಇತರರು ವಂಚನೆಗೊಳಗಾಗಿ ತಮ್ಮ ಹಣ ಆಸ್ತಿಗಳನ್ನು ಕಳೆದುಕೊಂಡು ಮನನೊಂದು ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ಹೆಚ್ಚುತ್ತಿದ್ದು ಈ ವಿಷಯದ ಬಗ್ಗೆ, ತಾವು ಕ್ರಮ ಕೈಗೊಳ್ಳುವ ಬಗ್ಗೆ ಮನವಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಛ ದಿನಗಳಲ್ಲಿ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳಲ್ಲಿ " ನಿಂದಾಗಿ ಭಾರತದ ವಿದ್ಯಾರ್ಥಿಗಳು, ಯುವಕರು, ಉದ್ಯೋಗಿಗಳು ತಾವು ಬೆವರು ಹರಿಸಿ ದುಡಿದ ದುಡ್ಡನ್ನು ಈ ರೀತಿಯಾದ ಅಕ್ರಮ ಬೆಟ್ಟಿಂಗ್ ಜೂಜಿನಲ್ಲಿ ಹಾಕಿ ಹಣ ಕಳೆದುಕೊಂಡು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಈ ಮೂಲಕ ಜನ ಜಾಗೃತಿ ಮೂಡಿಸಲು ಮತ್ತು ನಿಯಂತ್ರಿಸಲು ಕಾನೂನು ರೀತಿಯ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.
ಆಟಗಳ ಕಂಪನಿಗಳು: Rummy circle, junglee rummy, A23 rummy, . vision11 2. Ludo e carrom n : dreem 11, my11 circle, : Zupee ludo, rush-play ludo, winjo ludo carrom ಮತ್ತು ಹೆಚ್ಚಿನ ಕೌಶಲ್ಯ ಆಟದ ಕಂಪನಿಗಳಿವೆ. ಇವೆಲ್ಲವೂ ಕೌಶಲ್ಯ ಆಧಾರಿತ ಫ್ಯಾಂಟಸಿ ಆಟವಾಗಿದ್ದು ಸಲಹೆಯೊಂದಿಗೆ ಹೆಚ್ಚಿನ ಫ್ಯಾಂಟಸಿ ಆಟಗಳಲ್ಲಿ ಹಣವನ್ನು ಕಳೆದುಕೊಳ್ಳುವ ಅಪಾಯದೊಂದಿಗೆ ಯಾಂತ್ರಿಕ ಅಂಕಿ ಅಂಶಗಳನ್ನು ಹೊಂದಿದೆ.
(SKILL GAME) ಕೇಸಿನೊ ಗೇಮ್ಸ್, ಕಾರ್ಡ್ ಗೇಮ್ಸ್, ಸ್ಮಾಟ್ ಮಶಿನ್ಸ್ ಗೇಮ್ಸ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಫೂಟ್ ಬಾಲ್, ಟೆನ್ನಿಸ್ ಇನ್ನೂ ಹಲವು ಆಟಗಳನ್ನು ಹೊಂದಿವೆ. ಈ ಕೇಸಿನೋ ಬೆಟ್ಟಿಂಗ್ ವೆಬೈಟ್ ಯಾವುದೇ ರೀತಿ ಭಾರತದಲ್ಲಿ ರಿಜಿಸ್ಟರ್ ಆಗದೆ ಅಕ್ರಮವಾಗಿ ನಡೆಸುತ್ತಿದ್ದು ವೆಬೈಟ್ ಮೂಲಕ ಜನರ ದುಡ್ಡನ್ನು ಕೊಳ್ಳೆ ಹೊಡೆಯುತ್ತಿದ್ದಾರೆ, ಹಾಗೆ ನಮ್ಮ ದೇಶದ ಸರ್ಕಾರಕ್ಕೆ ಯಾವುದೇ ರೀತಿ ತೆರಿಗೆ ಪಾವತಿಸುತ್ತಿರುವುದಿಲ್ಲ.