ಡಿಸೆಂಬರ್ 10, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಎಂ. ಸಿ. ನಾರಾಯಣ್ ಅವರು ಮಾತನಾಡಿದರು.
ದಲಿತರಿಗೆ ಮೀಸಲಿಟ್ಟಿರುವ ಅನುದಾನ ಸಮರ್ಪಕ ಬಳಕೆಗಾಗಿ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಡಿಸೆಂಬರ್ 17ರಂದು "ನಮ್ಮ ನಡಿಗೆ - ಬೆಳಗಾವಿ ಸುವರ್ಣಸೌಧದ ಕಡೆಗೆ" ಜನಜಾಗೃತಿ - ಸಂಘರ್ಷ ಜಾಥಾ ನಡೆಯಲಿದೆ ಎಂದು ಎಂ. ಸಿ. ನಾರಾಯಣ್ ಅವರು ತಿಳಿಸಿದರು.
ಈ ಸಂಘರ್ಷ ಜಾಥಾ ಬೆಳಗಾವಿಯ ಡಾ|| ಬಿ. ಆರ್. ಅಂಬೇಡ್ಕರ್ ಉದ್ಯಾನವನದಿಂದ ಸುವರ್ಣಸೌಧದವರೆಗೆ ನಡೆಯಲಿದೆ ಎಂದು ಎಂ. ಸಿ. ನಾರಾಯಣ್ ಅವರು ತಿಳಿಸಿದರು.