ಬೆಂಗಳೂರಿನ ಪ್ರಸಿದ್ಧ ಆಸ್ಟರ್ ಆಸ್ಪತ್ರೆ ವತಿಯಿಂದ ನೀಡುವಂತಹ ಪ್ರತಿಷ್ಠಿತ 'ಆಸ್ಟರ್ ಗ್ಲೋಬಲ್ ನರ್ಸ್ -2024' ಪ್ರಶಸ್ತಿಯು ಈ ಬಾರಿ ಫಿಲಿಪ್ಪೈನ್ಸ್ ದೇಶದ ಮಾರಿಯಾ ವಿಕ್ಟೋರಿಯಾ ಜಾನ್ ಅವರಿಗೆ ದೊರೆತಿದೆ.

 ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು 'ಆಸ್ಟರ್ ಗ್ಲೋಬಲ್ ನರ್ಸ್ -2024' ಪ್ರಶಸ್ತಿ ಪ್ರದಾನ ಮಾಡಿದರು. 

   ಆಸ್ಟರ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಅಜಾದ್ ಮೊಪೆನ್ ಅವರು ಮಾತನಾಡಿ, ಗ್ಲೋಬಲ್ ನರ್ಸ್ ಪ್ರಶಸ್ತಿಗಾಗಿ 202 ದೇಶಗಳಿಂದ 78 ಸಾವಿರ ಅರ್ಜಿಗಳು ಬಂದಿದ್ದವು. 10 ಮಂದಿ ನರ್ಸ್ ಗಳನ್ನು ವಿವಿಧ ದೇಶಗಳಿಂದ ಆಯ್ಕೆ ಮಾಡಲಾಗಿತ್ತು. 10 ಮಂದಿ ನರ್ಸ್ ಗಳಲ್ಲಿ ಫಿಲಿಪ್ಪೈನ್ಸ್ ದೇಶದ ಮಾರಿಯಾ ವಿಕ್ಟೋರಿಯಾ ಜಾನ್ ಅವರಿಗೆ ಗ್ಲೋಬಲ್ ನರ್ಸ್ ಅವಾರ್ಡ್ ಪ್ರಶಸ್ತಿ ದೊರೆತಿದೆ ಎಂದು ಅಜಾದ್ ಮೊಪೆನ್ ಅವರು ಮಾಧ್ಯಮಗಳಿಗೆ ತಿಳಿಸಿದರು. 

 ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ನಟಿ ಸೋನಾಲಿ ಬೆಂದ್ರೆ, ಆಸ್ಟರ್ ಆಸ್ಪತ್ರೆಯ ಉಪ ನಿರ್ದೇಶಕಿ ಅಲಿಶಾ ಮೊಪೆನ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.