ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ "69ನೇ ಕನ್ನಡ ರಾಜ್ಯೋತ್ಸವ - 2024" ಸಂಭ್ರಮದಿಂದ ಆಚರಿಸಲಾಯಿತು. 

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ಈ ಸಮಾರಂಭವನ್ನು ಉದ್ಘಾಟಿಸಿದರು. 

ಕನ್ನಡ ಭಾಷೆಯು ತಾಯಿಯಿದ್ದಂತೆ ಹಾಗಾಗಿ ಕನ್ನಡಿಗರು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕೆಂದು ಚಂದ್ರಶೇಖರ ಕಂಬಾರ ಅವರು ಮನವಿ ಮಾಡಿದರು. 

 ಈ ಸಂದರ್ಭದಲ್ಲಿ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಂಸ್ಥಾಪಕರಾದ ಡಾ|| ಎ. ಸಿ. ಷಣ್ಮುಗಂ ಅವರು ಉಪಸ್ಥಿತರಿದ್ದರು. ಈ ವೇಳೆ ಡಾ. ಚಂದ್ರಶೇಖರ ಕಂಬಾರ ಅವರಿಗೆ ಡಾ|| ಎ. ಸಿ. ಷಣ್ಮುಗಂ ಅವರು ₹1 ಲಕ್ಷ ಕೊಡುಗೆ ನೀಡಿದರು.