ಅಕ್ಟೋಬರ್ 15, 2024
ಆಯುಷ್ ಸಚಿವಾಲಯ, ಭಾರತ ಸರ್ಕಾರ ದ 100 ದಿನಗಳ ಸಾಧನೆಗಳು
ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ, (CARI) ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಮಂಡಳಿಯ (CCRAS) ಆಯುಷ್ ಸಚಿವಾಲಯ, ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಸಂಸ್ಥೆಗಳಲ್ಲಿ ಒಂದಾಗಿದ್ದು, 1971ರಿಂದ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ತನ್ನ ಚಟುವಟಿಕೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಈಗ ಪ್ರಶಾಂತ ಸ್ಥಳದಲ್ಲಿ ನೆಲೆಗೊಂಡಿರುವ ಈ ಸಂಸ್ಥೆಯು ಆಯುರ್ವೇದದಲ್ಲಿ ಸಂಶೋಧನೆಯನ್ನು ಮುಂದುವರಿಸುತ್ತಿದ್ದು, ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರವನ್ನು ಎತ್ತಿಹಿಡಿಯುತ್ತಿದೆ. ಸಮಕಾಲೀನ ವೈಜ್ಞಾನಿಕ ವಿಧಾನಗಳೊಂದಿಗೆ ಸಾಂಪ್ರದಾಯಿಕ ಆಚರಣೆಗಳನ್ನು ಸಂಯೋಜಿಸುವುದರ ಮೂಲಕ ಆಯುರ್ವೇದದ ಸಾಮರ್ಥ್ಯದದ ಬಗ್ಗೆ ಆಳವಾದ ತಿಳುವಳಿಕೆಯನ್ನು ಒದಗಿಸುತ್ತಿದೆ. ಈ ಸಂಸ್ಥೆಯನ್ನು ಆಯುಷ್ ಸಚಿವಾಲಯವು " Centre of excellence in Madhumeha(Diabetes mellitus) ” ಎಂದು ಗುರುತಿಸಿದೆ. ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಗಳಿಗೆ ಸಂಬಂಧಿಸಿದ ಪ್ರತಿಕೂಲ ಔಷಧ ಪ್ರತಿಕ್ರಿಯೆಗಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವರದಿ ಮಾಡಲು ಇದು Peripheral Pharmacovigilance centre ಗಳಲ್ಲಿ ಒಂದಾಗಿದೆ.
CARI ವೈವಿಧ್ಯಮಯ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಚಟುವಟಿಕೆಗಳಲ್ಲಿ ತೊಡಗಿರುವ ಬಹುಶಿಸ್ತೀಯ ತಂಡವನ್ನು ಹೊಂದಿದೆ. ಅದರ NABL ಮತ್ತು NABH ಮಾನ್ಯತೆ ಪಡೆದ ಆಸ್ಪತ್ರೆ ವಿಭಾಗದ ಮೂಲಕ ಕ್ಲಿನಿಕಲ್ ಸೇವೆಗಳನ್ನು ಒದಗಿಸಲಾಗುತ್ತಿದೆ. (OPD, 28 ಹಾಸಿಗೆಗಳ ಒಳರೋಗಿ ಸೌಲಭ್ಯ ಟೆಲಿಮೆಡಿಸಿನ್ ಮತ್ತು ಸಮುದಾಯದ ಔಟ್ರೀಚ್). ಈ ಸೇವೆಗಳಲ್ಲಿ (ಪರಿಣಿತ ಸಮಾಲೋಚನೆಗಳು), ಆಯುರ್ವೇದ ಔಷಧಾಲಯ, ರೋಗನಿರ್ಣಯ ಪ್ರಯೋಗಾಲಯ (ಬಯೋಕೆಮಿಸ್ಟ್ರಿ, ಹೆಮಟಾಲಜಿ, ಅಲ್ಟ್ರಾ ಸೌಂಡ್, ಎಕ್ಸ್-ರೇ ಮತ್ತು ಇಸಿಜಿ), ಪಂಚಕರ್ಮ, ಯೋಗ ಚಿಕಿತ್ಸೆಗಳು, ರೋಗಿಗಳಿಗಾಗಿ ಆಂಬ್ಯುಲೆನ್ಸ್ ಮತ್ತು ಕ್ಯಾಂಟೀನ್ ವ್ಯವಸ್ಥೆಗಳನ್ನು ಹೊಂದಿದೆ. ಇವುಗಳ ಮೂಲಕ ಸರ್ಕಾರದ ಪ್ರಮುಖ ಉಪಕ್ರಮಗಳಾದ ಸ್ವಚ್ಛ ಭಾರತ ಮತ್ತು ಪೋಷಣೆ ಮಿಷನ್ ಅನ್ನು ಬೆಂಬಲಿಸತ್ತದೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಹಕಾರದೊಂದಿಗೆ EMRS ಯೋಜನೆಯನ್ನು (ಏಕಲವ್ಯ ಮಾದರಿ ವಸತಿ ಶಾಲೆಗಳು) ಇತ್ತೀಚಿಗೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕ್ಷಯರೋಗ, ರಕ್ತಹೀನತೆ, ಹಿಮೋಗ್ಲೋಬಿನೋಪತಿ ಮತ್ತು ಅಪೌಷ್ಟಿಕತೆಯ ತಪಾಸಣೆ ಹಾಗೂ ಆಯುರ್ವೇದದ ಔಷಧಿಗಳ ವಿತರಣೆ ಮಾಡಲಾಗುತ್ತದೆ. EMRS ಶಾಲೆಗಳ ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ಈ ಯೋಜನೆಯನ್ನು 16 CCRAS ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದೆ ಮತ್ತು ದೇಶದಾದ್ಯಂತ 55 EMRS ಶಾಲೆಗಳ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.