ಸೆಪ್ಟೆಂಬರ್ 25, 2024
ಬೆಂಗಳೂರಿನ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ (ದೊಮ್ಮಲೂರು) ಅಕ್ಟೋಬರ್ 22, 23 ರಂದು ಬಯೋ ಡೈನಮಿಕ್ ಅಸೋಶಿಯೇಶನ್ ಆಫ್ ಇಂಡಿಯಾ ವತಿಯಿಂದ "ಜೀವ ಚೈತನ್ಯ ಕೃಷಿ"ಯ ಕುರಿತಂತೆ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಬಯೋ ಡೈನಮಿಕ ಅಸೋಶಿಯೇಶನ್ ಆಫ್ ಇಂಡಿಯಾ ತನ್ನ 25ನೇ ವರ್ಷಾಚರಣೆಯನ್ನು ಭಾರತದಲ್ಲಿ ಆಚರಿಸುತ್ತಿದೆ ಮತ್ತು ಡಾ. ರುಡಾಲ್ಫ್ ಸ್ಟ್ರೈನೆರ್ ಅವರ ಉಪನ್ಯಾಸದ ಶತಮಾನೋತ್ಸವವನ್ನು ಆಚರಿಸುತ್ತಿದೆ.
ಅಕ್ಟೋಬರ್ 22 ಹಾಗೂ 23 ರಂದು ನಡೆಯಲಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಬಯೋಡೈನಮಿಕ್ ಕೃಷಿಯ ವಿವಿಧ ವಿಷಯಗಳಾದ ಮಣ್ಣಿನ ಆರೋಗ್ಯ, ಬೆಳೆ ಉತ್ಪಾದನೆ ಮತ್ತು ಸುಸ್ಥಿರ ಕೃಷಿ ಹಾಗೂ ಜೀವನೋಪಾಯಗಳ ಬಗ್ಗೆ ಉಪನ್ಯಾಸಗಳು ಕಾರ್ಯಕಾರಗಳು ಮತ ಚರ್ಚೆಗಳನ್ನು ಒಳಗೊಂಡಿರುತ್ತದೆ.