ಸೆಪ್ಟೆಂಬರ್ 14, 2024

ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ 'ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್' ನ 2023-24ನೇ ಸಾಲಿನ "11ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ" ನಡೆಯಿತು. 

  ಅಧ್ಯಕ್ಷರಾದ ಆರ್. ಆನಂದ್ ಅವರ ನೇತೃತ್ವದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ" ನಡೆಯಿತು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ವಿ. ನರಸಿಂಹಯ್ಯ ಸೇರಿದಂತೆ 17 ನಿರ್ದೇಶಕರು ಭಾಗಿಯಾಗಿದ್ದರು. 

 ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಸದಸ್ಯರು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್' ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ನಿರ್ಧಾರ ತೆಗೆದುಕೊಂಡರು. 

    ಮುಂದಿನ 6 ತಿಂಗಳಳೊಳಗೆ ಉತ್ತರ ಕರ್ನಾಟಕದಲ್ಲಿ ಸೊಸೈಟಿಯ ಮತ್ತೊಂದು ಕಚೇರಿಯನ್ನು ಆರಂಭಿಸುವುದಾಗಿ ಅಧ್ಯಕ್ಷರಾದ ಆರ್. ಆನಂದ್ ಅವರು ಮಧ್ಯಮಗಳಿಗೆ ತಿಳಿಸಿದರು.

 ಈ ಸಂದರ್ಭದಲ್ಲಿ 'ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್' ವತಿಯಿಂದ ಸಂಸ್ಥಾಪಕರಾದ ಎಸ್.ಎಂ. ಕೃಷ್ಣ ಅವರ ಪುತ್ರರಾದ ರಘು ಅವರಿಗೆ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.