ಸೆಪ್ಟೆಂಬರ್ 6, 2024

ಬೆಂಗಳೂರಿನ ಜಿ.ಟಿ. ಮಾಲ್ ನಲ್ಲಿ ಶ್ರೀ ಸಾಯಿ ಗಗನ್ ಪ್ರೊಡಕ್ಷನ್ ವತಿಯಿಂದ "ಸರ್ವಸ್ವ" ಎ ಮ್ಯೂಸಿಕಲ್ ವಿಡಿಯೋ ಸಾಂಗ್ ಲೋಕಾರ್ಪಣೆ ಸಮಾರಂಭ ನಡೆಯಿತು. 

ಈ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ದೊಡ್ಡರಂಗೇಗೌಡ, ಕನ್ನಡದ ಖ್ಯಾತ ನಟಿ ತಾರಾ ಅನುರಾಧ, ಅಬಲಾಶ್ರಮ ಸಂಸ್ಥೆಯ ಡಾ. ವಿಜಯಲಕ್ಷ್ಮಿ ದೇಶಮಾನೆ, ಖ್ಯಾತ ಬರಹಗಾರರಾದ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಲಹರಿ ಆಡಿಯೋ ಸಂಸ್ಥೆಯ ವೇಲು ಅವರು ಉಪಸ್ಥಿತಿ ವಹಿಸಿದ್ದರು. 

   ಯುವನಿರ್ದೇಶಕ ಅರ್ಜುನ್ ಕಿಶೋರ್ ಚಂದ್ರ ಅವರು ಕಥೆ ಬರೆದು "ಸರ್ವಸ್ವ" ಮ್ಯೂಸಿಕಲ್ ವಿಡಿಯೋ ಸಾಂಗ್ ನಿರ್ದೇಶನ ಮಾಡಿದ್ದಾರೆ. ಐರ್ಲೆಂಡ್ ನಲ್ಲಿ ಸರ್ವಸ್ವಮೇಜಿಕಲ್ ವಿಡಿಯೋ ಸಾಂಗ್ ಚಿತ್ರೀಕರಣ ನಡೆದಿದ್ದು, ಅದ್ಭುತ ದೃಶ್ಯಕಾವ್ಯವಾಗಿ ಮೂಡಿಬಂದಿದೆ. 

    ದತ್ತು ಸ್ವೀಕಾರದ ಬಗ್ಗೆ ಈ ವಿಡಿಯೋ ಸಾಂಗ್ ನಲ್ಲಿ ಉತ್ತಮ ಸಂದೇಶವಿದೆ. ನಿರ್ಮಾಪಕರಾದ ರಾಜಶೇಖರ್ ಅವರು ಸರ್ವಸ್ವ ಮ್ಯೂಸಿಕಲ್ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ.