ಜುಲೈ 19, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಶೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

   ಈ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ವಿ. ಹರೀಶ್ ಅವರು ಮಾತನಾಡಿದರು. 

   'ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್' ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಎಸಗಿದ್ದಾರೆ ಎಂದು ವಿ. ಹರೀಶ್ ಅವರು ಆರೋಪಿಸಿದರು. ಇದೊಂದು ದೊಡ್ಡ ಮಟ್ಟದ ಹಗರಣವಾಗಿದ್ದು, ಸದ್ಯ ಈ ಹಗರಣದ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ. ಆದರೆ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನವರು ಇನ್ನೂ ಠೇವಣಿದಾರರಿಗೆ ₹1800 ಕೋಟಿ ನೀಡಬೇಕಾಗಿದೆ. 

 ರಾಜ್ಯ ಸರ್ಕಾರ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಹಗರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿ ಬಾಕಿ ಬರಬೇಕಿರುವ 1800 ಕೋಟಿ ರೂಪಾಯಿಗಳನ್ನು ಠೇವಣಿದಾರರಿಗೆ ನೀಡಬೇಕೆಂದು ವಿ. ಹರೀಶ್ ಅವರು ಒತ್ತಾಯಿಸಿದರು.