ಜುಲೈ 19, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಕನ್ನಡ ಫಿಲಂ ಚೇಂಬರ್' ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ರವೀಂದ್ರ ಅವರು ಮಾತನಾಡಿದರು.
'ಕನ್ನಡ ಫಿಲಂ ಚೇಂಬರ್' ನ ಎಲ್ಲಾ ಸದಸ್ಯರಿಗೆ ಲೈಫ್ ಇನ್ಸೂರೆನ್ಸ್ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತೇವೆ. ಜತೆಗೆ ಎಲ್ಲ ಸದಸ್ಯರ ಸರ್ವತೋಮುಖ ಅಭಿವೃದ್ಧಿ ಶ್ರಮಿಸುತ್ತೇವೆ ಎಂದು ರವೀಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದರು.
ಇತ್ತೀಚಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ರವೀಂದ್ರ ಅವರು ಆರೋಪಿಸಿದರು.