ಜೂನ್ 8, 2024
ಶಿಕ್ಷಣವು ಮಿತಿಯಿಲ್ಲದ ಸಾಧ್ಯತೆಗಳನ್ನು ತೆರೆಯುವ ಕೀಲಿಯಾಗಿದೆ. ಸರೋಜಿನಿ ದಾಮೋದರನ್ ಫೌಂಡೇಶನ್ (ಎಸ್‌ಡಿಎಫ್) ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 11 ನೇ ತರಗತಿಯ ಕರ್ನಾಟಕ ವಿದ್ಯಾಧನ ವಿದ್ಯಾರ್ಥಿವೇತನ ಅರ್ಜಿಗಳನ್ನು ತೆರೆಯುವುದನ್ನು ಘೋಷಿಸಲು ಹೆಮ್ಮೆಪಡುತ್ತದೆ.
2024 ರಲ್ಲಿ SSLC ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮವು ಆಯ್ದ ವಿದ್ಯಾರ್ಥಿಗಳಿಗೆ ಅವರ ವೈಯಕ್ತಿಕ ಮತ್ತು ವ್ಯಕ್ತಿತ್ವ ವಿಕಸನ, ಕೌಶಲ್ಯ ತರಬೇತಿ, ಮಾರ್ಗದರ್ಶನ ಮತ್ತು ವೃತ್ತಿಪರ ತರಬೇತಿಗಕನ್ನು ನೀಡುವುದರ ಮೂಲಕ ಬೆಂಬಲವನ್ನು ಒದಗಿಸುತ್ತದೆ. 2014 ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದಾಗಿನಿಂದ, 1552 ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡಲಾಗಿದೆ.
ಕರ್ನಾಟಕ ಪಿಯುಸಿ ಕಾರ್ಯಕ್ರಮ 2023 ವಿದ್ಯಾಧಾನ್ ವಿದ್ಯಾರ್ಥಿ ವೇತನವು, ವಾರ್ಷಿಕ ಆದಾಯ ರೂ ೨ ಲಕ್ಷಕ್ಕಿಂತ ಕಡಿಮೆ ಹೊಂದಿರುವ ಇರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನವನ್ನು ಕರೆಯಲಾಗಿದೆ. ಅರ್ಹ ಅಭ್ಯರ್ಥಿಗಳು 2024 ರಲ್ಲಿ ಕರ್ನಾಟಕ ರಾಜ್ಯದಿಂದ SSLC ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರಬೇಕು, 90% (ಅಥವಾ ವಿಕಲಾಂಗ ವಿದ್ಯಾರ್ಥಿಗಳಿಗೆ 75%) ಅಥವಾ ಎಲ್ಲಾ ವಿಷಯಗಳಲ್ಲಿ A+ ಗ್ರೇಡ್ ಪಡೆದಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪಿಯುಸಿ ಅಧ್ಯಯನದ ಅವಧಿಯಲ್ಲಿ ವರ್ಷಕ್ಕೆ 10,000 ರೂ.ಗಳ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ನಂತರ ಅವರ ಪದವಿಯನ್ನು ಮುಂದುವರಿಸಲು 15,000 ರಿಂದ ರೂ. ವರ್ಷಕ್ಕೆ 75,೦೦೦ ತನಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು www.vidyadhan.org ಗೆ ಭೇಟಿ ನೀಡುವ ಮೂಲಕ ಅಥವಾ ‘SDF Vidya ‘(ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ) ಬಳಸುವ ಮೂಲಕ ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಮೇ 16, 2024 ರಿಂದ ಆರಂಭವಾಗಿರುವ ಕರ್ನಾಟಕ ವಿದ್ಯಾರ್ಥಿ ವೇತನದ ಅರ್ಜಿಗಳು ಜೂನ್ 3O, 2023 ರವರೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು vidyadhan.karnataka@sdfoundationindia.com ಅಥವಾ ವಿದ್ಯಾಧನ್ ಸಹಾಯವಾಣಿಯನ್ನು +91 9663517131 ನಲ್ಲಿ ಸಂಪರ್ಕಿಸಬಹುದು.
ಎಸ್.ಡಿ.ಎಫ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು 1999 ರಲ್ಲಿ ಎಸ್.ಡಿ.ಶಿಬುಲಾಲ್ (ಸಹ-ಸ್ಥಾಪಕ ಮತ್ತು ಮಾಜಿ ಸಿ.ಇ.ಒ, ಇನ್ಫೋಸಿಸ್) ಮತ್ತು ಕುಮಾರಿ ಶಿಬುಲಾಲ್ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಗುರಿಯೊಂದಿಗೆ ಸ್ಥಾಪಿಸಿದರು. ಅಂದಿನಿಂದ ಫೌಂಡೇಶನ್ ತನ್ನ ವಿದ್ಯಾಧನ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಮಹಾರಾಷ್ಟ್ರ, ಗುಜರಾತ್, ಗೋವಾ, ಒಡಿಶಾ, ದೆಹಲಿ, ಲಡಾಖ್, ಜಾರ್ಖಂಡ್ ಮತ್ತು ಬಿಹಾರ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್ ಸೇರಿದಂತೆ 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಸ್ತರಿಸಿದೆ. ಇಲ್ಲಿಯವರೆಗೆ, ಎಸ್.ಡಿ .ಎಫ್ 41,000 ಕ್ಕೂ ಹೆಚ್ಚು ವಿದ್ಯಾರ್ಥಿವೇತನವನ್ನು ನೀಡಿದೆ, ಇದರ ಪರಿಣಾಮವಾಗಿ ವಿದ್ಯಾಧನ ಹಳೆ ವಿದ್ಯಾರ್ಥಿಗಳು ಎಂಜಿನಿಯರ್‌ಗಳಾಗಿ, ವೈದ್ಯರಾಗಿ, ದಾದಿಯಾರಾಗಿ, ಚಾರ್ಟರ್ಡ್ ಅಕೌಂಟೆಂಟ್‌ಗಳಾಗಿ , ರಕ್ಷಣಾ ಪಡೆಗಳು ಸೇರಿದಂತೆ ಸರ್ಕಾರಿ ಮತ್ತುಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ 1 ಲಕ್ಷ ಸ್ಕಾಲರ್‌ಶಿಪ್‌ಗಳನ್ನು ನೀಡುವುದರ ಮೂಲಕ ಮತ್ತು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ತಲುಪುವುದು ಎಸ್.ಡಿ .ಎಫ್ ನ ಗುರಿಯಾಗಿದೆ.
ಸರೋಜಿನಿ ದಾಮೋದರನ್ ಫೌಂಡೇಶನ್ ನಿಮ್ಮ ಬಳಿ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳು, ಕರ್ನಾಟಕದ ಗ್ರಾಮೀಣ ಭಾಗಗಳಿಗೆ ಈ ವಿಷಯವನ್ನು ತಲುಪಿಸಲು ಸಹಕರಿಸುವಂತೆ ಕೇಳಿಕೊಳ್ಳುತ್ತದೆ.