ಮೇ 9, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಮಹಾ ಬೋಧಿ ಸೊಸೈಟಿ"ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಬೆಂಗಳೂರಿನ 'ಮಹಾ ಬೋಧಿ ಸೊಸೈಟಿ' ವತಿಯಿಂದ ಮೇ 23ರಂದು "ವೈಶಾಖ ಬುದ್ಧ ಪೂರ್ಣಿಮೆ" ಮತ್ತು "2568ನೇ ಪವಿತ್ರ ಬುದ್ಧ ಜಯಂತಿ ಆಚರಣೆ - 2024" ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಮಹಾ ಬೋಧಿ ಸೊಸೈಟಿಯಲ್ಲಿ ಮೇ 17 ರಿಂದ 23ರ ವರೆಗೆ ಏಳು ದಿನಗಳ ಕಾಲ ಬೋಧಿ ಸಪ್ತಾಹವೆಂದು ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೇ 23ರ ವೈಶಾಖ ಬೌದ್ಧ ಪೂರ್ಣಿಮೆಯಂದು ನಡೆಯುವ ಕಾರ್ಯಕ್ರಮಗಳಲ್ಲಿ 100 ಬೌದ್ಧ ಸನ್ಯಾಸಿಗಳು ಮತ್ತು ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.