ಏಪ್ರಿಲ್ 16, 2024
ಬೆಂಗಳೂರಿನ ಸೇಂಟ್ ಪಾಲ್ಸ್ ಕಾಲೇಜು ಸಭಾಂಗಣದಲ್ಲಿ ಏಪ್ರಿಲ್ 20ರಂದು "ಆಗುಂಬಾಪುರ" ಸಾಕ್ಷ್ಯಚಿತ್ರದ ಗ್ರಾಂಡ್ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಗಿದೆ.
"ಆಗುಂಬಾಪುರ" ಸಾಕ್ಷ್ಯಚಿತ್ರವನ್ನು ಕೆ. ಸಂಜಯ್ ಕುಮಾರ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಟೆರ್ರಾ ರೈಡರ್ಸ್ ಎಂಬ ಸಂಸ್ಥೆಯು "ಆಗುಂಬಾಪುರ" ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದೆ.
ಪ್ರಕೃತಿ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಆಗುಂಬಾಪುರ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ನಿರ್ದೇಶಕರಾದ ಕೆ. ಸಂಜಯ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.