ಏಪ್ರಿಲ್ 6, 2024 

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಡಾ. ಹರೀಶ್ ಗೌಡ ಅವರು ಸ್ಪರ್ಧಿಸಿದ್ದಾರೆ. 

 ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಡಾ. ಹರೀಶ್ ಗೌಡ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. 

 ಆರೋಗ್ಯ ಮತ್ತು ಶಿಕ್ಷಣ ಎಲ್ಲಾ ವರ್ಗದ ಜನರಿಗೆ ಸಮಾನವಾಗಿ ಸಿಗಬೇಕೆಂದು ಡಾ. ಹರೀಶ್ ಗೌಡ ಅವರು ಅಭಿಪ್ರಾಯಪಟ್ಟರು. ಸುಮಾರು 20 ವರ್ಷಗಳಿಂದ ನಾನು ವೈದ್ಯಕೀಯ ಸೇವೆಯಲ್ಲಿ ನಿರತನಾಗಿದ್ದೇನೆ. ಕೋವಿಡ್ ಸಮಯದಲ್ಲಿ ಬಡವರು ಹಾಗೂ ಮಾಧ್ಯಮ ವರ್ಗದ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಅನುಕೂಲ ಮಾಡಿದ್ದೇನೆ ಎಂದು ಡಾ. ಹರೀಶ್ ಗೌಡ ಅವರು ಹೇಳಿದರು.

   ಮುಂದಿನ ದಿನಗಳಲ್ಲೂ ಸಹ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನರ ಸೇವೆಗಾಗಿ ಜೀವನವನ್ನು ಮುಡುಪಿಡುತ್ತೇನೆ ಎಂದು ಡಾ. ಹರೀಶ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಹಾಗಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಜನರು ನನಗೆ ಮತ ನೀಡಿ ಗೆಲುವು ಸಿಗುವಂತೆ ಮಾಡುತ್ತಾರೆ ಎಂದು ಡಾ. ಹರೀಶ್ ಅವರು ಹೇಳಿದರು. 

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಪ್ರಭಾವಿ ನಾಯಕರು ಸ್ಪರ್ಧಿಸಿದ್ದರೂ ಸಹ ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಡಾ. ಹರೀಶ್ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.