ಏಪ್ರಿಲ್ 4, 2024 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಇಂದು ಆರ್.ಪಿ.ಐ (A) ಪಕ್ಷದ ಅಭ್ಯರ್ಥಿಯಾಗಿ ವೆಂಕಟೇಶ್ (ಹೆಬ್ಬಾಳ) ಅವರು ನಾಮಪತ್ರ ಸಲ್ಲಿಸಿದರು. 

 ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರವಾಗಿ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಅವಕಾಶಗಳು ಸಿಗಬೇಕೆಂದು ವೆಂಕಟೇಶ್ (ಹೆಬ್ಬಾಳ) ಅವರು ಹೇಳಿದರು. 

ದೀನದಲಿತರ ಹಾಗೂ ಬಡವರ ಸೇವೆ ಮಾಡುವ ಸಲುವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ವೆಂಕಟೇಶ್ (ಹೆಬ್ಬಾಳ) ಅವರು ಹೇಳಿದರು.