ಏಪ್ರಿಲ್ 1, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಕರ್ನಾಟಕ ರಾಜ್ಯ ತಿಗಳರ (Vahni kula)ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಮು. ಕೃಷ್ಣಮೂರ್ತಿ ಅವರು ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತಿಗಳ ಸಮುದಾಯಕ್ಕೆ ಸೇರಿದ ಹೂಡಿ ವಿಜಯಕುಮಾರ್ ಅವರ ಅವರ ಸೋಲಿಗೆ ಮಾಜಿ ಸಚಿವರಾದ ಡಾ. ಸುಧಾಕರ್ ಅವರು ಕಾರಣರಾಗಿದ್ದಾರೆ.
ಹಾಗಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಡಾ. ಸುಧಾಕರ್ ಅವರಿಗೆ ತಿಗಳ ಸಮುದಾಯದವರು ಡಾ.ಕೆ. ಸುಧಾಕರ್ ಅವರನ್ನು ಬೆಂಬಲಿಸಬಾರದು ಎಂದು ಮು. ಕೃಷ್ಣಮೂರ್ತಿ ಅವರು ಮನವಿ ಮಾಡಿದರು.
ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಹೂಡಿ ವಿಜಯ್ ಕುಮಾರ್ ಅವರು ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದರು. ಜತೆಗೆ ಹೂಡಿ ವಿಜಯ್ ಕುಮಾರ್ ಅವರು ಮಾಲೂರು ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದರು. ಆದರೆ ಡಾ. ಕೆ ಸುಧಾಕರ್ ಅವರು ಹೂಡಿ ವಿಜಯ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದರು. ಆದಕಾರಣ ಓಡಿ ವಿಜಯಕುಮಾರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹಾಗಾಗಿ ಡಾ. ಕೆ ಸುಧಾಕರ್ ಅವರನ್ನು ನಾವು ವಿರೋಧಿಸುತ್ತೇವೆ. ಜೊತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಡಾ. ಕೆ. ಸುಧಾಕರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಮು. ಕೃಷ್ಣಮೂರ್ತಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಿಗಳರ ಸಮುದಾಯದ ಪ್ರಮುಖ ನಾಯಕರಾದ ಸುಬ್ಬಣ್ಣ ಹಾಗೂ ಜಯರಾಜ್ ಅವರು ಉಪಸ್ಥಿತರಿದ್ದರು.