ಮಾರ್ಚ್ 20, 2024 

ಜಗದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಏಪ್ರಿಲ್ 10 ರಿಂದ 15 ರವರೆಗೆ "ರಾಜ್ಯಮಟ್ಟದ ಒಂಬತ್ತನೇ ವರ್ಷದ ಭಜನಾ ಸ್ಪರ್ಧೆ" ಏರ್ಪಡಿಸಲಾಗಿದೆ.

   ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಏಪ್ರಿಲ್ 10ರ ಒಳಗಾಗಿ ಶ್ರೀ ಮಠದ ಟ್ರಸ್ಟ್ ಕಮಿಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕೆಂದು ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಪೂಜೇರಿ ಅವರು ಮಾಧ್ಯಮಗಳಿಗೆ ತಿಳಿಸಿದರು.