ಮಾರ್ಚ್ 12, 2024
"ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ - 2021" ರದ್ದುಪಡಿಸಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ರ್ಯಾಪಿಡೊ ಕಂಪನಿ
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಓಡಾಟಕ್ಕೆ ಸೂಕ್ತ ಕಾನೂನು ಬದ್ದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವನ್ನೂ ನೀಡುವುದಾಗಿ ಕಂಪೆನಿ ಹೇಳಿದೆ.
ಬೆಂಗಳೂರು, ಮಾರ್ಚ್ 12, 2024: ದೇಶದ ಪ್ರಮುಖ ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಕಂಪೆನಿ ಆಗಿರುವ ರ್ಯಾಪಿಡೊ 2021 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಇದೀಗ ಹಿಂತೆಗೆದುಕೊಂಡಿರುವ ಸರ್ಕಾರದ ನಿರ್ಧಾರಕ್ಕೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕಂಪೆನಿಯು ಈ ಮಹತ್ವದ ಕ್ರಮವು ಬೈಕ್ಟ್ಯಾಕಿ ಚಾಲನಾ ಕ್ಷೇತ್ರದಲ್ಲಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಅಲ್ಲದೆ ನಾವೀನ್ಯತೆ ಮತ್ತು ಬೆಳವಣಿಗೆಗೆ ಅನುಕೂಲಕರ ವಾತಾವರಣ ಮಾಡಿದೆ ಎಂದು ಹೇಳಿದೆ.
ಆದರೆ ಸರ್ಕಾರವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕೆಲವೊಂದು ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಅಸಮರ್ಪಕ ಮಾಹಿತಿಗಳನ್ನು ಪ್ರಸಾರ ಮಾಡಲಾಗುತಿದ್ದು ಈ ಬಗ್ಗೆ ಗೊಂದಲ ನಿರ್ಮಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಹೈಕೋರ್ಟಿನ ಆದೇಶದ ರಕ್ಷಣೆಯಲ್ಲಿ ಕಾರ್ಯನಿರ್ವಹಿಸುವ ರ್ಯಾಪಿಡೊ ಅಥವಾ ಇತರ ಯಾವುದೇ ಅಗ್ರಿಗೇಟರ್ ಅನ್ನು ನಿಷೇಧಿಸುವ ಬಗ್ಗೆ ಸರ್ಕಾರದ ಆದೇಶದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಕಂಪನಿ ಗಮನಸೆಳೆದಿದೆ. ಈಗ ನಡೆಯುತ್ತಿರುವ ಕಾನೂನು ಪ್ರಕರಣದಲ್ಲಿ ಸಂಬಂಧಿತ ಒಕ್ಕೂಟಗಳು ಸಲ್ಲಿಸಿದ ಮಧ್ಯಸ್ಥಿಕೆ ವಿನಂತಿಗಳನ್ನು ಜನವರಿ 2023 ರಲ್ಲಿ ಹೈಕೋರ್ಟ್ ವಜಾಗೊಳಿಸಿದೆ. ಕಾನೂನು ಪ್ರಕ್ರಿಯೆಯನ್ನು ಗೌರವಿಸಲು ಮತ್ತು ಕಾರ್ಯಾಚರಣೆಗಳಿಗೆ ಅಡ್ಡಿಪಡಿಸುವ ಕ್ರಮಗಳನ್ನು ತಪ್ಪಿಸಲು ರ್ಯಾಪಿಡೊ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತದೆ.
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ 2021 ರಲ್ಲಿ ಅಧಿಸೂಚಿಸಿ ಮತ್ತು ಈಗ 2024 ರಲ್ಲಿ ಹಿಂತೆಗೆದುಕೊಂಡಿರುವುದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಪರವಾನಗಿ ನೀಡಲು ಮಾತ್ರ ಸಂಬಂಧಿಸಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ., ಈ ಅಂಶವು ಷರತ್ತು 1(4) ರ ಅಡಿಯಲ್ಲಿ ಈ ಯೋಜನೆಯು ಮಾತ್ರ ಅನ್ವಯಿಸುತ್ತದೆ ಎಂದು ನಿರ್ದಿಷ್ಟವಾಗಿ ಕಂಪೆನಿ ಉಲ್ಲೇಖಿಸಿದೆ. ಸರ್ಕಾರದ ಆದೇಶವು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅಥವಾ ಎಲೆಕ್ಟ್ರಿಕ್ ಬೈಕುಗಳಿಗೆ ಮಾತ್ರ ಸಂಬಂದಿಸಿದ್ದಾಗಿದೆ ಮತ್ತು ರ್ಯಾಪಿಡೋ ದ ಪ್ರಸ್ತುತ ಕಾರ್ಯಾಚರಣೆಯು ಕಾನೂನಿಗೆ ಅನುಗುಣವಾಗಿಯೇ ಇದೆ ಎಂದು ಕಂಪೆನಿ ಹೇಳಿದೆ. ಈ ಕುರಿತು ಹೆಚ್ಚಿನ ಕಾನೂನು ಮಾಹಿತಿ ನೀಡಿರುವ ಕಂಪೆನಿ ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಾಗಿ ದ್ವಿಚಕ್ರ ವಾಹನಗಳನ್ನು ನಿರ್ವಹಿಸುವ ಇತರ ಅದೇ ಸ್ಥಾನಿಕ ಅಗ್ರಿಗೇಟರ್ಗಳು ಸಲ್ಲಿಸಿರುವ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯ ಪ್ರಕರಣವು 2021 ರಿಂದ ಗೌರವಾನ್ವಿತ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಉಳಿದಿದೆ ಎಂದು ತಿಳಿಸಿದೆ.
ಹೈಕೋರ್ಟ್ 2021 ರಲ್ಲಿ ರ್ಯಾಪಿಡೊ ಪರವಾಗಿ ಮಧ್ಯಂತರ ರಕ್ಷಣಾತ್ಮಕ ಆದೇಶವನ್ನು ನೀಡಿದ್ದು ಆದೇಶದ ಪೂರ್ಣ ಪಾಠ ಇಂತಿದೆ.
“ಅರ್ಜಿದಾರರು (ರ್ಯಾಪಿಡೊ) ಸಾರಿಗೆ ಆಯುಕ್ತರಿಗೆ ಬೈಕ್ ಅಗ್ರಿಗೇಟರ್ ಪರವಾನಗಿ ಮಂಜೂರು ಮಾಡಲು ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಅರ್ಜಿದಾರರು ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಪ್ರಾಧಿಕಾರದ ಮುಂದೆ ಅಗ್ರಿಗೇಟರ್ ಪರವಾನಗಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ರ್ಯಾಪಿಡೊ ಸಲ್ಲಿಸಿರುವ ಅರ್ಜಿಯು ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯೇತರ ಬೈಕ್ ಅಗ್ರಿಗೇಟರ್ ಲೈಸೆನ್ಸ್ ಮಂಜೂರು ಮಾಡುವ ಕುರಿತು ಆಗಿದೆ. ಕರ್ನಾಟಕ ಎಲೆಕ್ಟ್ರಿಸಿಟಿ ಬೈಕ್ ಟ್ಯಾಕ್ಸಿ ಯೋಜನೆ, 2020-21 ಅನ್ನು ಉಲ್ಲೇಖಿಸಿರುವ ಕೋರ್ಟು ಇದರ ಮಾನದಂಡವನ್ನು ವಿದ್ಯುತ್ಯೇತರ ಬೈಕ್ಟ್ಯಾಕ್ಸಿ ಯೋಜನೆಗೆ ಅನ್ವಯಿಸಲಾಗುವುದಿಲ್ಲ ಎಂದು ಹೇಳಿದೆ. ಅರ್ಜಿದಾರರ ಅರ್ಜಿಯು ಸಾಮಾನ್ಯ ಬೈಕ್ ಟ್ಯಾಕ್ಸಿಗೆ ಪರವಾನಗಿಯನ್ನು ನೀಡುವುದರ ಕುರಿತಾಗಿದೆ ” ಮತ್ತು ಈ ನಿರ್ದಿಷ್ಟ ಅವಲೋಕನಗಳ ಆಧಾರದ ಮೇಲೆ ಹೈಕೋರ್ಟ್ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ರಿಗೇಟರ್ ಅಥವಾ ಅದರ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ರಕ್ಷಣಾತ್ಮಕ ಮಧ್ಯಂತರ ಆದೇಶವು ಈಗಲೂ ಜಾರಿಯಲ್ಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಜನವರಿ 22 ರಂದು ಇತ್ತೀಚೆಗೆ ಮೋಟಾರು ವಾಹನಗಳು (MV) ಕಾಯಿದೆ, 1988 ರ ಸೆಕ್ಷನ್ 2(7) ರ ಪ್ರಕಾರ ಗುತ್ತಿಗೆ ಕ್ಯಾರೇಜ್ಗಳ ವ್ಯಾಖ್ಯಾನದೊಳಗೆ ಬರುತ್ತದೆ ಎಂದು ಸ್ಪಷ್ಟನೆಯನ್ನೂ ನೀಡಿದೆ.
*ಈ ಕುರಿತು ಮಾತನಾಡಿದ ರ್ಯಾಪಿಡೊ ಸಹ-ಸಂಸ್ಥಾಪಕರಾದ ಪವನ್ ಗುಂಟಪಲ್ಲಿ* ಅವರು "ನಾವು ನಮ್ಮ ಗ್ರಾಹಕರು ಮತ್ತು ಕ್ಯಾಪ್ಟನ್ಗಳಿಗೆ ಕರ್ನಾಟಕದಲ್ಲಿ ರ್ಯಾಪಿಡೊ ನಿರಂತರ ಕಾರ್ಯಾಚರಣೆಯನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಲು ಬಯಸುತ್ತೇವೆ. ರಾಪಿಡೋದ ಕಾನೂನುಬದ್ಧತೆಯನ್ನು ಗುರುತಿಸುವ ಗೌರವಾನ್ವಿತ ಹೈಕೋರ್ಟ್ನಿಂದ ಹೊರಡಿಸಲಾಗಿರುವ ಮಧ್ಯಂತರ ಆದೇಶವನ್ನು ಎತ್ತಿಹಿಡಿಯುತ್ತೇವೆ.