ಮಾರ್ಚ್ 11, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಾಗೂ ಮಹಾತ್ಮ ಗಾಂಧೀಜಿ ಅವರ ವೇಷಧಾರಿ ಮುತ್ತುರಾಯಪ್ಪ (ಗಾಂಧಿ) ಅವರ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ, ಸಚಿವರ ಹಾಗೂ ಶಾಸಕರ ಶಿಫಾರಸು ಪತ್ರಗಳನ್ನು ಆಪ್ತ ಕಾರ್ಯದರ್ಶಿಗಳು ಪರಿಗಣಿಸದೆ ಕಡತಗಳಿಗೆ ಅನುಮೋದನೆ ನೀಡುತ್ತಿಲ್ಲ ಎಂದು ಮುತ್ತುರಾಯಪ್ಪ ಅವರು ಆರೋಪಿಸಿದರು.