ಫೆಬ್ರವರಿ 6, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಪಿ.ಆರ್.ಆರ್ ರೈತ ಹಾಗೂ ನಿವೇಶನದಾರರ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಮಾವಳಿಪುರ ಶ್ರೀನಿವಾಸ್ ಅವರು ಮಾತನಾಡಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಪೆರಿಪೆರಲ್ ರಿಂಗ್ ರಸ್ತೆಯ ಅಭಿವೃದ್ಧಿ ಕೈಗೊಳ್ಳಲು ದಿನಾಂಕ 25.01.2024ರಂದು ಪ್ರಕಟಣೆ ಹೊರಡಿಸಿ ಕಾನೂನುಬಾಹಿರವಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.
ಕಾನೂನು ಬಾಹಿರವಾಗಿ ಕರೆದಿರುವ ಟೆಂಡರ್ ಅನ್ನು ವಿರೋಧಿಸಿ ಫೆಬ್ರವರಿ 9ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.