ಜನವರಿ 15, 2024 

ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು "ಸಂಗೀತ ವಿದ್ವಾನ್ ಚಿಂತಲಪಲ್ಲಿ ವೆಂಕಟರಾಮಯ್ಯ ಅವರ ಜನ್ಮ ಶತಮಾನೋತ್ಸವ ಸಮಾರಂಭ" ನಡೆಯಿತು.

  ಈ ಸಮಾರಂಭವನ್ನು ಗಾನಕಲಾ ಭೂಷಣ ಖ್ಯಾತ ಸಂಗೀತ ವಿದ್ವಾನ್ ಡಾ. ಆರ್. ಕೆ. ಪದ್ಮನಾಭ, ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ, ಸಂಗೀತ ವಿದ್ವಾನ್ ಪ್ರೊ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರು ಉದ್ಘಾಟನೆ ಮಾಡಿದರು.

ಈ ಅರ್ಥಪೂರ್ಣ ಸಮಾರಂಭವು ಸಂಗೀತ ವಿದ್ವಾನ್ ಚಿಂತಲಪಲ್ಲಿ ವೆಂಕಟರಾಮಯ್ಯ ಅವರ ಸುಪುತ್ರರಾದ ಸಂಗೀತ ವಿದ್ವಾನ್ ವಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು.