ನವದೆಹಲಿ: ಭಾರತೀಯ ದಂಡ ಸಂಹಿತೆ (Indian Penal Code -IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (Code of Criminal Procedure -CrPC) ಮತ್ತು ಸಾಕ್ಷ್ಯ ಕಾಯ್ದೆಯನ್ನು ಬದಲಿಸುವ ಮೂರು ಕ್ರಿಮಿನಲ್ ಮಸೂದೆಗಳನ್ನು ( three criminal bills ) ರಾಷ್ಟ್ರಪತಿ ದ್ರೌಪದಿ ಮುರ್ಮು ( President Droupadi Murmu ) ಅವರು ಒಪ್ಪಿಗೆ ನೀಡಿದ ನಂತರ ಸೋಮವಾರ ಕಾನೂನಾಗಿ ಜಾರಿಗೆ ತರಲಾಯಿತು.
ಭಾರತೀಯ ಸಾಕ್ಷರತಾ ಸಂಹಿತಾ, 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ, 2023 ಮತ್ತು ಭಾರತೀಯ ನ್ಯಾಯ ಸಂಹಿತಾ, 2023 ಅನ್ನು ಸಂಸತ್ತಿನ ಉಭಯ ಸದನಗಳು ಈ ಹಿಂದೆ ಪ್ರಕ್ಷುಬ್ಧ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿದ್ದವು.
ಹೀಗೆ ವಿಪಕ್ಷಗಳ ನಾಯಕರ ಅಮಾನತುಗಳ ನಡುವೆ ಮೂರು ಕ್ರಿಮಿನಲ್ ಮಸೂದೆಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆ ನಂತ್ರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕೆ ಕಳುಹಿಸಲಾಗಿತ್ತು. ಹೀಗೆ ಕಳುಹಿಸಲಾಗಿದ್ದಂತ ಮೂರು ಕ್ರಿಮಿನಲ್ ಮಸೂದೆಗಳಿಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ದೇಶದಲ್ಲಿ ಕಾನೂನಾಗಿ ಜಾರಿಗೊಂಡಂತೆ ಆಗಿದೆ.