December 21, 2023
ಬೆಂಗಳೂರಿನ "ಶರವಣ ಚಾರಿಟಬಲ್ ಟ್ರಸ್ಟ್" ವತಿಯಿಂದ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ ಶ್ರೀ ವೆಂಕಟೇಶ್ವರ ದೇವಾಲಯಗಳಿಗೆ 'ಒಂದು ಲಕ್ಷ ಲಡ್ಡು ಪ್ರಸಾದ ವಿತರಣೆ ಕಾರ್ಯಕ್ರಮ'ಕ್ಕೆ ಚಾಲನೆ ನೀಡಲಾಯಿತು.
ಶರವಣ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರವಣ ಅವರು ಒಂದು ಲಕ್ಷ ಲಡ್ಡು ಪ್ರಸಾದ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಡಿನಾದ್ಯಂತ ಡಿಸೆಂಬರ್ 23ರಂದು ವೈಕುಂಠ ಏಕಾದಶಿ ಸಂಭ್ರಮಾಚರಣೆ ನಡೆಯಲಿದೆ.