December 19, 2023

ದೆಹಲಿ: 

ದೆಹಲಿಯಲ್ಲಿ ಕೇಂದ್ರ ಸಚಿವ ಪಿಯ್ಯೂಷ್ ಗೋಯಲ್ ರನ್ನು ಭೇಟಿಯಾದ ಸಚಿವ ಕೆ.ಎಚ್. ಮುನಿಯಪ್ಪ 

ಕೇಂದ್ರ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಸಚಿವ ಪಿಯ್ಯೂಷ್ ಗೋಯಲ್ ರನ್ನು ಆಹಾರ ಸಚಿವ ಕೆಹೆಚ್.ಮುನಿಯಪ್ಪ ಅವರು ಭೇಟಿಯಾದರು.

ಈ ಸಂದರ್ಭದಲ್ಲಿ ಉಭಯ ನಾಯಕರು ರಾಜ್ಯದ ಪಡಿತರ ವಿಚಾರ ಹಾಗೂ ಅಕ್ಕಿಗೆ ಸಂಭಂದಿಸಿದಂತೆ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರದ ಕಾರ್ಯದರ್ಶಿ ಜಿಸಿ.ಪ್ರಕಾಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.