ಬೆಂಗಳೂರಿನ ಯುವನಿಕಾ ಸಭಾಂಗಣದಲ್ಲಿ ಡಿಸೆಂಬರ್ 15ರಂದು "15ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ" ನಡೆಯಲಿದೆ.
ಈ ಕಾರ್ಯಕ್ರಮವು ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ, ಕೇಂದ್ರದ ಗೃಹ ಇಲಾಖೆ, ಕರ್ನಾಟಕದಲ್ಲಿ ನೆಹರು ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಿ ಆರ್ ಪಿ ಎಫ್, ಬಿಎಸ್ಎಫ್ ಸಹಯೋಗದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯದ ಕ್ರೀಡಾ ಸಚಿವರಾದ ಬಿ ನಾಗೇಂದ್ರ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿ ಸಿ ಮೋಹನ್, ತೇಜಸ್ವಿ ಸೂರ್ಯ ಅವರು ಭಾಗಿಯಾಗಲಿದ್ದಾರೆ.