December 14, 2023 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಕಲಾ ಸೌರಭ ಫೌಂಡೇಶನ್ ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

    ಈ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ವಿದ್ವಾನ್ ದತ್ತಾತ್ರಿ ಅವರು ಮಾತನಾಡಿದರು. ಐಪಿಎಲ್ ಮಾದರಿಯಲ್ಲಿ "ಕಲಾ ಸೌರಭ ದ್ರೋಣಾರ್ಜುನ ಲೀಗ್ -2023" ಎಂಬ ಹೆಸರಿನಲ್ಲಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಈ ಸ್ಪರ್ಧೆಯ ಫೈನಲ್ ಕಾರ್ಯಕ್ರಮವು ಡಿಸೆಂಬರ್ 17 ರಂದು ಮಲ್ಲೇಶ್ವರಂ ನ ಸ್ಪೋರ್ಟ್ಸ್ ಕ್ಲಬ್ ಒಂದರಲ್ಲಿ ನಡೆಯಲಿದೆ ಎಂದು ವಿದ್ವಾನ್ ದತ್ತಾತ್ರಿ ಅವರು ಮಾಧ್ಯಮಗಳಿಗೆ ತಿಳಿಸಿದರು.

   ಫೈನಲ್ ನಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಉಡುಗೊರೆ ನೀಡಲಾಗುವುದು ಎಂದು ವಿದ್ವಾಂತ್ ದತ್ತಾತ್ರಿ ಅವರು ತಿಳಿಸಿದರು.