ನವೆಂಬರ್ 28 2023 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಕರ್ನಾಟಕ ಗಾಣಿಗರ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

   ಬೆಂಗಳೂರಿನ ಅಂಜನಾಪುರ ವಾರ್ಡ್ ನ ಅವಲಹಳ್ಳಿಯ ಗಾಣಿಗರ ಸಂಘದ ಆವರಣದಲ್ಲಿ ಡಿಸೆಂಬರ್ 2ರಂದು ಅಖಿಲ ಕರ್ನಾಟಕ ಗಾಣಿಗರ ಸಂಘದ "ಸುವರ್ಣ ಮಹೋತ್ಸವ ಸಮಾರಂಭ" ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಎಂ. ಆರ್ ರಾಜಶೇಖರ್ ಅವರು ಮಾಧ್ಯಮಗಳಿಗೆ ತಿಳಿಸಿದರು.

     ಜೊತೆಗೆ ಸಂಘದ ನೂತನ ಕಟ್ಟಡ ಬ್ಲಾಕ್ 1 ಉದ್ಘಾಟನೆ, ಬ್ಲಾಕ್ ಎರಡು ಕಟ್ಟಡದ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ ಎಂದು ಎಂ ಆರ್ ರಾಜಶೇಖರ್ ಅವರು ತಿಳಿಸಿದರು. ಈ ಸಮಾರಂಭವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಗಾಣಿಗರ ಈ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ರಾಜಶೇಖರ್ ತಿಳಿಸಿದರು.