ನವೆಂಬರ್ 11, 2023
ಬೆಂಗಳೂರಿನ ಜಿಮ್ಖನಾ ಕ್ಲಬ್ ನಲ್ಲಿ 'ಮನು ಜ್ಯೋತಿ' ಆಶ್ರಮದ ವತಿಯಿಂದ "ವಿಮೋಚನೆಯ ರಹಸ್ಯ" ಪುಸ್ತಕ ಲೋಕಾರ್ಪಣೆಯಾಯಿತು.
ಕೆ.ಎ.ಎಸ್ ಅಧಿಕಾರಿಯಾದ ಸಂಗಮೇಶ್ ಉಪಾಸೆ ಅವರು 'ವಿಮೋಚನೆಯ ರಹಸ್ಯ' ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೆ.ಆರ್. ಪುರ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ, ಆಯುರ್ ಆಶ್ರಮದ ಡಾ. ಸಂತೋಷ್ ಗುರೂಜಿ, ಶ್ರೀದೇವಿ ಮೆಡಿಕಲ್ ಕಾಲೇಜಿನ ಭೀಮರಾಜ್ ಅವರು ಉಪಸ್ಥಿತರಿದ್ದರು.
ವಿಮೋಚನಾ ರಹಸ್ಯ ಪುಸ್ತಕವನ್ನು ಮನುಜ್ಯೋತಿ ಆಶ್ರಮದ ದೇವಾಸೀರ್ ಲಾರಿ ಎಂಬುವವರು ಬರೆದಿದ್ದಾರೆ. ಮನುಷ್ಯ ಅನೇಕ ಗೊಂದಲಗಳಿಂದ ಹೊರ ಬರಬೇಕಾದರೆ ಹೇಗೆ ಎಂಬ ಬಗ್ಗೆ ಈ ಪುಸ್ತಕದ ಸಾರಾಂಶದಲ್ಲಿದೆ. ಮನು ಕುಲದಲ್ಲಿರುವ ಎಲ್ಲ ದೇವರು, ಧರ್ಮ ಒಂದೇ ಆಗಿದೆ ಎಂಬ ಸಂದೇಶಗಳನ್ನು ಸಾರುವ ಉದ್ದೇಶವನ್ನು ಈ ಪುಸ್ತಕ ತಿಳಿಸುತ್ತದೆ.