ಬೆಂಗಳೂರು : ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ಮೈನಿಂಗ್ ಇಂಜಿನಿಯರ್ ಗಳ 33ನೇ ರಾಷ್ಟ್ರೀಯ ಸಮಾವೇಶ ಮತ್ತು ತಿದ್ದುಪಡಿ ಮಾಡಿದ ಗಣಿ ನಿಯಮಗಳು ಮತ್ತು ಗಣಿಗಾರಿಕೆ ಉದ್ಯಮದ ಮೇಲೆ ಅದರ ಪ್ರಭಾವ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಗಸ್ಟ್ 11 ಹಾಗೂ 12 ರಂದು ಬೆಂಗಳೂರಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಿಧಿ ಬಳಿ ಇರುವ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಐಇಐ ಯಂಗ್ ಇಂಜಿನಿಯರ್ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ)ದ ಗೌರವ ಕಾರ್ಯಧ್ಯಕ್ಷರಾದ ಡಾಕ್ಟರ್ ಎನ್.ಟಿ ರಂಗಾರೆಡ್ಡಿ ರವರು ನಗರದ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಸಂಘಟನಾ ಕಾರ್ಯದರ್ಶಿ ಡಾ. ಮೇದಾ ವೆಂಕಟಯ್ಯ ಉಪಸ್ಥಿತರಿದ್ದರು.