ದೇಶದಲ್ಲಿ ದಿನದಿಂದ ದಿನಕ್ಕೆ ಟೊಮ್ಯಾಟೊ ದರ ದುಪ್ಪಟ್ಟಾಗುತ್ತಿದೆ. ಟೊಮ್ಯಾಟೊ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಕೆಂಪು ಹಣ್ಣಿನ ಮೇಲೆ ಕಣ್ಣಾಕಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ರಾಜಸ್ಥಾನಕ್ಕೆ ಹೊರಟಿದ್ದ ಮೆಹತ್ ಟ್ರಾನ್ಸ್‌ಪೋರ್ಟ್‌ ನ ಟೊಮ್ಯಾಟೊ ತುಂಬಿದ್ದ ಲಾರಿ ಕಣ್ಮರೆಯಾಗಿದೆ. ಜುಲೈ 27 ರಂದು 21 ಲಕ್ಷ ರೂಪಾಯಿಯ ಟೊಮ್ಯಾಟೊ ಹೊತ್ತು ರಾಜಸ್ಥಾನಕ್ಕೆ ಹೊರಟಿತ್ತು. ಆದರೀಗ ಲಾರಿ ಚಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾರಿ ಹಾಗೂ ಟೊಮ್ಯಾಟೊ ಮಾಲೀಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.