ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ನ ಜೈ ಮಾರುತಿ ನಗರ ವೃತ್ತದಲ್ಲಿಂದು ಶ್ರೀ ಅಣ್ಣಮ್ಮ ಸೇವಾ ಸಮಿತಿ ಮತ್ತು ಸಾಂಸ್ಕೃತಿಕ ಸಂಘ ಜೈ ಮಾರುತಿ ನಗರ ವತಿಯಿಂದ ಅಣ್ಣಮ್ಮದೇವಿ, ದುಗ್ಗಲಮ್ಮದೇವಿ ಹಾಗೂ ಬನಶಂಕರಿ ಅಮ್ಮ ದೇವತೆಗಳ 3 ದಿನಗಳ ಊರ ಹಬ್ಬ ಆಚರಣೆ ಮಹೋತ್ಸವ ಹಾಗೂ 43 ವರ್ಷದ ವಾರ್ಷಿಕೋತ್ಸವ ಆಚರಣೆ ಸಮಾರಂಭ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂದು ದೇವತೆಗಳನ್ನು ಕೂಡಿಸಿ ಪೂಜೆ ಸಲ್ಲಿಸಿ ಊರ ಜನರು ಭಕ್ತಿ ಭಾವದಿಂದ ಮಿಂದೆದ್ದು,ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ಊರ ಹಬ್ಬಕ್ಕೆ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ದೇವರ ದರ್ಶನ ಪಡೆದು ಊರ ಹಬ್ಬಕ್ಕೆ ಶುಭಾಶಯ ಕೋರಿದರು. ನಂತರ ಮಾತನಾಡಿದ ಅವರು ಇಂದಿನ ವೈಜ್ಞಾನಿಕ ಯುಗದಲ್ಲಿ ಕೂಡ ಪಾರಂಪರಿಕ ಹಳ್ಳಿ ಸೊಗಡಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಊರಿನ ಸಮಸ್ತ ಜನತೆಗೆ ಶುಭಾಶಯ ಕೋರಿದರು. ನಂತರ ನಿಮ್ಮ ಸಹಕಾರದಿಂದ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಿದ್ದು, ನಿಮ್ಮ ವಾರ್ಡ್ ಗಳ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ಮಾಡಿದ್ದು, ಇನ್ನೂ ಬಾಕಿ ಉಳಿದಿರುವ ಕೆಲಸಗಳನ್ನ ಬೇಗ ಮಾಡಿಮುಗಿಸುವದಾಗಿ ಹೇಳಿದ ಗೋಪಾಲಯ್ಯ ಅವರು ಕ್ಷೇತ್ರದ ಎಲ್ಲ ಜನರು ದಿನದ 24 ಗಂಟೆ ನನ್ನ ಕಚೇರಿಗೆ ಭೇಟಿ ನೀಡಿ ತಮ್ಮ ಕುಂದು ಕೊರತೆಗಳ ಬಗ್ಗೆ ಗಮನಕ್ಕೆ ತರಬೇಕು, ತಕ್ಷಣ ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡಿಕೊಡಲಾಗುವುದು ಎಂದು ಹೇಳಿ, ಕರೋನ ಬಂದ ಸಮಯದಲ್ಲಿ ಕ್ಷೇತ್ರದ ಎಲ್ಲ ಜನರಿಗೆ ಫುಡ್ ಕಿಟ್ ಔಷಧಿ ವಿತರಣೆ ಹಾಗೂ ಆಕ್ಸಿಜನ್ ಸೇರಿದಂತೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ,ಮುಂದಕ್ಕೆ ಮಾಡುತ್ತೇನೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ರಘು ನಾಗರಾಜ್, ಎಂ,ಪ್ರಸನ್ನ , ಲೋಕೇಶ್, ಕುಣಿಗಲ್ ನಾಗಣ್ಣ,ಕಾರ್ಯಕ್ರಮ ಸಂಘಟಕರಾದ ಮಂಜುನಾಥ್( ಕರೆಂಟ್), ಗಂಗ ನಾಗಪ್ಪ,ಮನೋಹರ್ ,ಸುಧಾಕರ್ ರಾಜು, ಬೋರೇಗೌಡ, ಸೇರಿದಂತೆ ಹಲವು ಗಣ್ಯರು ಹಾಗೂ ಊರಿನ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾನ ಸೇವೆ ನಡೆದವು.