ಬೆಂಗಳೂರು : ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಇಂದು ಬೆಳಗ್ಗೆ ಚಾತುರ್ಮಾಸ್ಯ ಸಮಿತಿ ವತಿಯಿಂದ ಸಾಧಕ ಶ್ರೀ ಪ್ರಶಸ್ತಿ ಹಾಗೂ ಸನ್ಮಾನ ಸಮಾರಂಭ ನಡೆಯಿತು. ಸಂಘದಲ್ಲಿ ಹರಿಹರಪುರದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿರವರು 90 ದಿನಗಳ ಕಾಲ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದಾರೆ.
ಹೀಗಾಗಿ ಇಂದು ಈ ಚಾತುರ್ಮಾಸ್ಯ ಸಮ್ಮೇಳನದಲ್ಲಿ ಇಬ್ಬರು ಸಾಧಕರಾದ ನಗರದ ಪ್ರಖ್ಯಾತ ಆಯುರ್ವೇದ ವೈದ್ಯರಾದ "ಗಿರಿಧರ್ ಖಜೆ, ಹಾಗೂ ರಾಷ್ಟ್ರೀಯ ರೈತ ಪ್ರಶಸ್ತಿ ವಿಜೇತರಾದ ಎಂ, ಪ್ರಕಾಶ್ ರಾವ್ ಮಂಚಾಲೆ ಇವರಿಗೆ ಚಾತುರ್ಮಾಸ್ಯ ಆಚರಣೆ ಸಮಿತಿ ವತಿಯಿಂದ ಸಾಧಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ಮಾಜಿ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು, ಮಾಜಿ ಶಾಸಕರಾದ ನೆ ಲ ನರೇಂದ್ರ ಬಾಬು, ಮಾಜಿ ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್, ಹರಿಹರಪುರ ಮಠದ ಆಡಳಿತಾಧಿಕಾರಿ ಗಳಾದ ಬಿ ಎಸ್ ರವಿಶಂಕರ್ ,ಚಾತುರ್ಮಾಸ್ಯ ಸಮಿತಿಯ ಪ್ರಧಾನ ಸಂಚಾಲಕರಾದ ರಾಘವೇಂದ್ರ ಭಟ್ , ಕ್ಷೇತ್ರ ಬಿಜೆಪಿ ಮುಖಂಡರಾದ, ವೆಂಕಟೇಶ್ ಮೂರ್ತಿ, ಗಂಗ ಹನುಮಯ್ಯ, ರಘು ನಾಗರಾಜ್,ಶಿವಾನಂದ್ ಮೂರ್ತಿ, ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಚನ ಪಡೆದರು.