ಬೆಂಗಳೂರು : ದಕ್ಷಿಣ ವಲಯದಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಯಾವುದೇ ಅನಾಹುತ ಆಗದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ವಿವಿಧ ಇಲಾಖೆಗಳ ಜೊತೆ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದ ವೇಳೆ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಲ್ಲಿಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಾಳಿ ಸಹಿತ ಮಳೆಯಾದ ವೇಳೆ ಸಾಕಷ್ಟು ಕಡೆ ಮರಗಳು, ರೆಂಬೆ-ಕೊಂಬೆಗಳು ಧರೆಗುರುಳಲಿವೆ. ಈ ಸಂಬಂಧ ಪಾಲಿಕೆಯ ಅರಣ್ಯ ಶಾಖೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸಮನ್ವಯದೊಂದಿಗೆ ಬಿದ್ದಂತಹ ಮರಗಳನ್ನು ಕೂಡಲೆ ತೆರವುಗೊಳಿಸಿ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು. ದಕ್ಷಿಣ ವಲಯ ವ್ಯಾಪ್ತಿಯ ಮಳೆ ನೀರುಗಾಲುವೆಗಳಲ್ಲಿ ಜಲಮಂಡಳಿಯ ಪೈಪ್ಗಳು ಅಡ್ಡಲಾಗಿರುವುದನ್ನು ಗುರುತಿಸಿ ಅವುಗಳನ್ನು ಬೇರೆಡೆ ಸ್ಥಳಾಂತರಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಈ ಪೈಕಿ ಜಲಮಂಡಳಿ ಇಲಾಖೆ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ದಕ್ಷಿಣ ವಲಯ ವ್ಯಾಪ್ತಿಯಲ್ಲಿ 10 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿದ್ದು, 8 ಕಡೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇನ್ನುಳಿದೆರಡು ಕಡೆ ತಾತ್ಕಾಲಿಕ ಪರಿಹಾರ ತೆಗೆದುಕೊಳ್ಳಲಾಗಿದ್ದು, ಮಳೆಗಾಲ ಪೂರ್ಣಗೊಂಡ ಬಳಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ವಲಯ ಜಂಟಿ ಆಯುಕ್ತರಾದ ಡಾ. ಕೆ. ಜಗದೀಶ್ ನಾಯ್ಕ್, ಉಪ ಆಯುಕ್ತರಾದ ಲಕ್ಷ್ಮೀದೇವಿ, ಮುಖ್ಯ ಅಭಿಯಂತರರಾದ ರಾಜೇಶ್, ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
राज्य सरकारी कर्मचारी सहकारी पतसंस्थेवर सहकार वैभव पॅनलचा एकतर्फी विजय
राज्य सरकारी कर्मचारी सहकारी पतसंस्थेवर सहकार वैभव पॅनलचा एकतर्फी विजय
ભાભર ના ખાડિયા માં આવેલી આંગણવાડી કેન્દ્ર ની હાલત ખુબજ જર્જરિત છે
ભાભર ના ખાડિયા માં આવેલી આંગણવાડી કેન્દ્ર ની હાલત ખુબજ જર્જરિત છે
এটি কলি দুটি পাত চাহ শ্ৰমিক জিন্দাবাদ ধ্বনিৰে উত্তাল মথুৰাপুৰ চাহ বাগিচা
এটি কলি দুটি পাত চাহ শ্ৰমিক জিন্দাবাদ ধ্বনিৰে উত্তাল মথুৰাপুৰ চাহ বাগিচা। প্ৰাপ্য বিচাৰি অব্যাহত...
लाल झंडा ऑटो रिक्शा चालक यूनियन की और से गुजरात से आई कावड़ यात्रा का किया स्वागत
रावतभाटा लाल झंडा ऑटो रिक्शा चालक यूनियन की तरफ से उज्जैन से आई सोमनाथ गुजरात रावतभाटा पहुंचने पर...
કાંકરેજના વહેપારી મથક થરા માંથી બે વહેપારીઓ પાસેથી એસોજીએ ૨૬૧૪ નંગ ચાઈનીઝ દોરીનો જથ્થો ઝડપી પાડ્યો
કાંકરેજના વહેપારી મથક થરા માંથી બે વહેપારીઓ પાસેથી એસોજીએ ૨૬૧૪ નંગ ચાઈનીઝ દોરીનો જથ્થો ઝડપી પાડ્યો