ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದಲ್ಲಿ ರಾಜ್ಯ ವೈಸ್ ಚೇರ್ ಮೆನ್ ಆಗಿ ಪವನ್ ಕುಮಾರ್ ನೇಮಕರಾಗಿದ್ದಾರೆ. ರಾಷ್ಟ್ರಿಯ ಕೋ-ಆರ್ಡಿನೇಟರ್ ಮುರುಳಿ ಕೃಷ್ಣ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಹಿಂದುಳಿದ ವಿಭಾಗ ಅಧ್ಯಕ್ಷರಾದ ರಾಜಣ್ಣರವರು ನೇಮಕಾತಿ ಆದೇಶ ನೀಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಯಶ್ವಸಿಯಾಗಿ ಜನ ಬೆಂಬಲದಿಂದ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇಕಡ 65%ರಷ್ಟು ಇದೆ. ಕೇಂದ್ರ ಬಿಜೆಪಿ ಸರ್ಕಾರ ದುರಾಡಳಿತ, ಜನವಿರೋಧಿ ನೀತಿಯಿಂದ ದೇಶ ಜನರ ಬೇಸತ್ತು ಹೋಗಿದ್ದಾರೆ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೆ.ವೆಂಕಟಸುಬ್ಬರಾಜು ವೆಂಕಟೇಶ್, ಓಲಂಪಿಕ್ ಶಂಕರ್, ರವರು ಪಾಲ್ಗೊಂಡಿದ್ದರು.