ಸುಶೀಲ್ ಮೆಮೋರಿಯಲ್ ಶಿಕ್ಷಣ ಸಮಾಜ ಸೇವಾ ಸಂಸ್ಥೆ ವತಿಯಿಂದ ಮಕ್ಕಳಲ್ಲಿ ರೋಗನಿರೋಧಕ ಹಾಗೂ ಸ್ಮರಣ ಶಕ್ತಿಯನ್ನು ವೃದ್ಧಿಸುವ ದಿವ್ಯ ಔಷಧ ‘ಸ್ವರ್ಣ ಬಿಂದು ಪ್ರಾಶನ’
ಬೆಂಗಳೂರು, ಜುಲೈ 10,2023: ಕಳೆದ 16 ವರ್ಷಗಳಿಂದ ರಾಜ್ಯದಲ್ಲಿ ಸಾಕಷ್ಟು ಸಮಾಜ ಸೇವಾ ಕಾರ್ಯದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುಶೀಲ್ ಮೆಮೋರಿಯಲ್ ಶಿಕ್ಷಣ ಸಮಾಜ ಸೇವಾ ಸಂಸ್ಥೆಯು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಆಯುರ್ವೇದಿಕ್ ಆರೋಗ್ಯ ಕೇಂದ್ರಗಳು, ಆರೋಗ್ಯ ಶಿಬಿರಗಳಲ್ಲಿ ಸ್ವರ್ಣ ಬಿಂದು ಪ್ರಾಸನವನ್ನು 16 ವರ್ಷದೊಳಗಿನ ಎಲ್ಲಾ ವರ್ಗದ ಮಕ್ಕಳಿಗೆ ಈಗಾಗಲೇ ಅತ್ಯಂತ ಯಶಸ್ವಿಯಾಗಿ ನೀಡಲಾಗಿರುತ್ತದೆ.
ಮಕ್ಕಳಲ್ಲಿ ಸ್ಮರಣ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆಯುರ್ವೇದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಶೀಲ್ ಮೆಮೋರಿಯಲ್ ಶಿಕ್ಷಣ ಸಮಾಜ ಸೇವಾ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.ಸ್ವರ್ಣಬಿಂದು ಪ್ರಾಶನ ಮಕ್ಕಳ ಭವಿಷ್ಯಕ್ಕೆ ಸ್ವರ್ಣ ಕವಚವಾಗಿದೆ.
ಇನ್ನು ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮವನ್ನು ಕೆಲವು ಕಡೆ ಯಾವುದೇ ಔಷಧಿಯ ಪರವಾನಗಿ ಹೊಂದಿರದ ಹಾಗೂ ಇಲಾಖೆಯ ಗಮನಕ್ಕೆ ತರದೇ ಅನಧಿಕೃತವಾಗಿ ನಕಲಿ ವಿವರಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳು ಹಾಗೂ ಶಿಬಿರವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತದೆ. ಆದ್ದರಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಅವರಲ್ಲಿರುವ ದಾಖಲೆಗಳ ಪತ್ರಗಳನ್ನು ಪರಿಸೀಲಿಸಿ ಪಡೆದುಕೊಳ್ಳುವುದು ಉತ್ತಮ ಎಂಬ ಮಾಹಿತಿ ನೀಡಲಾಯಿತು.
ಸುಶೀಲ್ ಮೆಮೊರಿಯಲ್ ಶಿಕ್ಷಣ ಸಮಾಜ ಸೇವಾ ಸೇವಾ ಸಂಸ್ಥೆಯು ಸಾಕಷ್ಟು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಮದ್ಯಪಾನ, ಧೂಮಪಾನ ಬಿಡಿಸುವ ಕಾರ್ಯಾಗಾರ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಸುಶೀಲ್ ಸ್ಮಾರಕ ಶಿಕ್ಷಣ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮುಳಗುಂದ ಹಾಗೂ ಮಕ್ಕಳ ಆಯುರ್ವೇದ ತಜ್ಞರು ಡಾ.ಅಜೀಜ್ ಅರಬರ ಉಪಸ್ಥಿತರಿದ್ದರು.