ಬೆಂಗಳೂರು : ಶ್ರೀ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ. ಶಂಕರಮಠ ಮತ್ತು ಶಕ್ತಿಗಣಪತಿನಗರ ವಾರ್ಡ್ ನಲ್ಲಿರುವ 25ಸರ್ಕಾರಿ ಶಾಲೆಗಳ ಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು,ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿರವರು, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಇತಿಹಾಸ ತಜ್ಞರಾದ ತಲಕಾಡು ಚಿಕ್ಕರಂಗೇಗೌಡರು ಶಾಲಾ ಮಕ್ಕಳಿಗೆ ವಿತರಿಸಿದರು. 

ಎಸ್. ಕೇಶವಮೂರ್ತಿರವರು ಮಾತನಾಡಿ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯ. ಸರ್ಕಾರಿ ಶಾಲೆ ಮಕ್ಕಳಿಗೆ ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಹೈಟೆಕ್ ಶಿಕ್ಷಣ ಸರ್ಕಾರಿ ಶಾಲೆ ಮಕ್ಕಳಿಗೆ ಸಿಗಬೇಕು.

ಮಕ್ಕಳ ಭವಿಷ್ಯ ಉಜ್ವಲವಾಗಲು ಶಿಕ್ಷಣದಲ್ಲಿ ಬದಲಾವಣೆ ತರಬೇಕು, ಪುಸ್ತಕದ ಓದಿನ ಜೊತೆಯಲ್ಲಿ ಮಕ್ಕಳ ಮಾನಸಿಕ, ದೃಹಿಕವಾಗಿ ಸಧೃಡವಾಗಿಸುವ ಕಡೆ ಗಮನಹರಿಸಬೇಕು.

ಇಂದು ಮಕ್ಕಳು ಪುಸ್ತಕ ಓದುವ ಕಡೆ ಗಮನಹರಿಸಿದೇ, ಮೊಬೈಲ್ ವೀಕ್ಷಣೆ ಮಾಡುವ ಗಮನಹರಿಸುತ್ತಿದ್ದಾರೆ ಇದು ಅಪಾಯಕಾರಿ ವಿಷಯವಾಗಿದೆ.

ಮೊಬೈಲ್ ನೋಡುವ ಚಟದಿಂದ ಮಕ್ಕಳು ದೂರ ಉಳಿಯಬೇಕು, ಪುಸ್ತಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಹೇಳಿದರು.

ಎಮ್. ಶಿವರಾಜು ರವರು ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರು, ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು.

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ರಾಷ್ಟ್ರ ಮತ್ತು ರಾಜ್ಯ ಸರ್ಕಾರದಲ್ಲಿ ಉನ್ನತ ಸ್ಥಾನಮಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಪ್ರತಿವರ್ಷದಂತೆ ಶಂಕರಮಠ ಮತ್ತು ಶಕ್ತಿಗಣಪತಿನಗರ ವಾರ್ಡ್ ನಲ್ಲಿರುವ 25ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 25000ಸಾವಿರ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಗುತ್ತಿದೆ.

ವಿದ್ಯಾದಾನ ಶೇಷ್ಠದಾನ ಅದ್ದರಿಂದ ಮಕ್ಕಳ ಶಿಕ್ಷಣಕ್ಕೆ ಮಹದೇವಪ್ಪ ಪ್ರತಿಷ್ಠಾನ ಶ್ರಮಿಸುತ್ತಿದೆ ಎಂದು ಹೇಳಿದರು. 

ಶಾಲೆಯಲ್ಲಿ ಮಕ್ಕಳಿಗೆ ಕಡಬ ಶ್ರೀನಿವಾಸ್ ರವರಿಂದ ಜಾದು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಸ್ಥಳೀಯರಾದ ಶ್ರೀಮತಿ ಮಲ್ಲಿಕಾ, ನಾರಾಯಣಸ್ವಾಮಿ, ಮುನಿರಾಜು, ನಾಗಪ್ಪ, ಸತ್ಯಪ್ರಕಾಶ್ ರವರು ಪಾಲ್ಗೊಂಡಿದ್ದರು.