ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನ ಜೈ ಮಾರುತಿ ನಗರದ ರವಿ ಬಡಾವಣೆ ಯಲ್ಲಿ "ಶ್ರೀ ಅಣ್ಣಮ್ಮ ದೇವಿ ನಾಗರಿಕರ ಹಿತರಕ್ಷಣಾ ಸಮಿತಿ (ರಿ) ರವಿ ಬಡಾವಣೆ ವತಿಯಿಂದ " ಜೈ ಮಾರುತಿ ನಗರ ಹಾಗೂ ಊರ ಹಬ್ಬದ ಪ್ರಯುಕ್ತ "ಶ್ರೀ ಅಣ್ಣಮ್ಮ , ಸರ್ಕಲ್ ಮಾರಮ್ಮ ಮತ್ತು ಶ್ರೀ ಬನಶಂಕರಿ ಅಮ್ಮ ದೇವತೆಗಳ ಅದ್ಧೂರಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ" ನಡೆಯಿತು. 3 ದಿನಗಳ ನಡೆಯುವ ಈ ಊರ ಹಬ್ಬದಲ್ಲಿ ಗ್ರಾಮ ದೇವತೆಗಳ ನ್ನು ಬೆಳ್ಳಿಯ ರಥದಲ್ಲಿ ಕುಳ್ಳಿರಿಸಿ ಡೊಳ್ಳು ಕುಣಿತ,ತಮಟೆ , ವೀರಗಾಸೆ,ಮತ್ತುಪೂಜಾ ಕುಣಿತ ಹಾಗೂ ವಾದ್ಯಗಳೊಂದಿಗೆ ಊರ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಆಯೋಜನೆ ಮಾಡಲಾಗಿತ್ತು.ಈ ಊರ ಹಬ್ಬದಲ್ಲಿ ಸ್ಥಳೀಯ ಶಾಸಕರು ಹಾಗೂ ಮಾಜಿ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ದೇವರ ದರ್ಶನ ಪಡೆದರು. ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಹಬ್ಬ ಮಾಡುವುದು ವಾಡಿಕೆ, ಹೀಗಾಗಿ ಇಂದು ಈ ಭಾಗದ ಎಲ್ಲ ಊರ ಜನರು ಸೇರಿ ಭಕ್ತಿ ಭಾವದಿಂದ ಮಿಂದೆದ್ದು ತಮ್ಮ ಮನೆ ಗಳನ್ನ ಸಿಂಗರಿಸಿ ಮನೆ ಮಂದಿಯೆಲ್ಲ ಎಲ್ಲರೂ ಸಂತೋಷದಿಂದ ಪಾಲ್ಗೊಂಡು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆ ದೇವರು ನಾಡಿನ ಸಮಸ್ತ ಜನತೆಗೆ ಒಳ್ಳೆಯದು ಮಾಡಲಿ ಎಂದು ಕೇಳಿಕೊಳ್ಳುತ್ತೇನೆ. ಇಂದಿನ ಈ ಒತ್ತಡದ ನಡುವೆ ನಡೆಯುವ ಸಾಂಪ್ರಾದಾಯಿಕ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದ್ರು. ಜೊತೆಗೆ ಈ ವಿಧಾನಸಭಾ ಚುನಾವಣೆ ಯಲ್ಲಿ ನಿಮ್ಮ ನಂದಿನಿ ಲೇಔಟ್ ವಾರ್ಡ್ ನಿಂದಾ ಅತೀ ಹೆಚ್ಚು ಮತ ನೀಡಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಿದ್ದು, ಇನ್ನೂ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಮತ್ತು ತಮ್ಮ ಯಾವುದೇ ರೀತಿಯ ಕುಂದು ಕೊರತೆಗಳಿದ್ದರು ನನ್ನ ಗಮನಕ್ಕೆ ನೇರವಾಗಿ ತನ್ನಿ ನಾನು ಅದನ್ನು ಬಗೆ ಹರಿಸಿಕೊಡುತ್ತೇನೆ ಎಲ್ಲರೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಕರೆ ನೀಡಿದರು.
पटौदी इंटरप्राइजेज एवं अलगोजा रिसोर्ट - बूंदी
पटौदी इंटरप्राइजेज एवं अलगोजा रिसोर्ट कीऔर से बूंदी वासियों को दीपावली की हार्दिक बधाई व शुभकामनाएं
ಈ ಊರ ಹಬ್ಬದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್,ಸ್ಥಳೀಯ ಮುಖಂಡರುಗಳಾದ ಬೋರೇಗೌಡ, ಸಾಯಿರೆಡ್ಡಿ ,ತಮ್ಮಣ್ಣ ಗೌಡ,ಬಾಬ್ಬಿ ಶಿವಕುಮಾರ್, ಪತ್ರಕರ್ತ ಅರುಣ್ ಕುಮಾರ್, ಸುಧಾಕರ್ , ಪೇಪರ್ ವೆಂಕಟೇಶ್ , ಶಿವಣ್ಣ, ಕಂಬಿ ಕೃಷ್ಣ, ರಂಗಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಈ ಊರ ಹಬ್ಬ ಆಚರಣೆ ಮಹೋತ್ಸವ ಸೇವಾ ಸಮಿತಿ ಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.