ಬೆಂಗಳೂರು : ಅಪರಾಧ ಪ್ರಕರಣದಲ್ಲಿ ಜೈಲು ಸೇರಿರುವ ಶಾಹಿದ್ ಪಾಷಾನನ್ನು ಜಗಜೀವನರಾಮ್ ನಗರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಸಂಗಪ್ಪ ಹಾಗೂ ವಿನಯ್, ಜೂನ್ 27ರಂದು ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ವಿಚಾರಣೆ ಮುಗಿದ ಬಳಿಕ, ಆತನನ್ನು ವಾಪಸು ಕಾರಾಗೃಹಕ್ಕೆ ಕರೆತಂದಿದ್ದರು.’

‘ಕಾರಾಗೃಹದ ಪ್ರವೇಶ ದ್ವಾರದಲ್ಲಿ ಶಾಹಿದ್ ಪಾಷಾನನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಆತನ ಬಳಿಯಿದ್ದ ಎರಡು ಜೀನ್ಸ್ ಪ್ಯಾಂಟ್‌ಗಳ ಒಳಭಾಗದಲ್ಲಿ 1 ಗ್ರಾಂ ಬ್ರೌನ್ ಶುಗರ್ ಹಾಗೂ 11 ಗ್ರಾಂ ಗಾಂಜಾ ಇರುವುದು ಗೊತ್ತಾಗಿತ್ತು. ಅವುಗಳನ್ನು ಜಪ್ತಿ ಮಾಡಿದ್ದ ಸಿಬ್ಬಂದಿ, ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಕಾರಾಗೃಹ ಬಳಿ ಮತ್ತೊಬ್ಬ ಬಂಧನ: ಕಾರಾಗೃಹದೊಳಗಿದ್ದ ಕೈದಿಗೆ ಡ್ರಗ್ಸ್ ನೀಡಲು ಬಂದಿದ್ದ ತಂಗರಾಜು ಅಲಿಯಾಸ್ ಪಾಲ್ (25) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೈದಿ ಮೊಹಮ್ಮದ್ ಇಮ್ಮಿಯಾಜ್ ಖಾನ್‌ಗೆ ಡ್ರಗ್ಸ್ ನೀಡಲೆಂದು ಆರೋಪಿ ತಂಗರಾಜು ಕಾರಾಗೃಹ ಬಳಿ ಬಂದಿದ್ದ. ಕಾರಾಗೃಹದೊಳಗೆ ಡ್ರಗ್ಸ್ ಸಾಗಿಸಲು ಕಾಯುತ್ತಿದ್ದ. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. * 4 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಕೈದಿ ಹಾಗೂ ತಂಗರಾಜು ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.