ಬೆಂಗಳೂರಿನ ರಾಜಭವನದಲ್ಲಿ ಗೌರವಾನ್ವಿತ ಘನತೆವೆತ್ತ ರಾಷ್ಟಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು
ಅವರೊಂದಿಗೆ ಎಫ್‍ಕೆಸಿಸಿಐ ನಿಯೋಗದ ಸಭೆ.
ಶ್ರೀ ಬಿ.ವಿ. ಗೋಪಾಲ್ ರೆಡ್ಡಿ, ಅಧ್ಯಕ್ಷರು, ಎಫ್‍ಕೆಸಿಸಿಐ ಉಪಾಧ್ಯಕ್ಷರಾದ ಶ್ರೀ ಎಂ ಜಿ ಬಾಲಕೃಷ್ಣ, ಡಾ. ಸಿಎ ಐ.ಎಸ್.ಪ್ರಸಾದ್, ನಿಕಟ ಪೂರ್ವ ಅಧ್ಯಕ್ಷರು, ಎಫ್‍ಕೆಸಿಸಿಐ FIt. Lt. ಕೆ.ಪಿ ನಾಗೇಶ್, ಛೇರ್ಮನ್, ಮಂಥನ್ ಸಮಿತಿ 2023 ಮತ್ತು ಡಾ. ವಿ. ಜಿ ಕಿರಣ್ ಕುಮಾರ್, ಛೇರ್ಮನ್, ಅಂತರರಾಷ್ಟ್ರೀಯ ವ್ಯವಹಾರಗಳ ಸಮಿತಿ, ಎಫ್‍ಕೆಸಿಸಿಐನ ನಿಯೋಗವು ಗೌರವಾನ್ವಿತ ಘನತೆವೆತ್ತ ರಾಷ್ಟ್ರಪತಿಗಳು ಶ್ರೀಮತಿ ದ್ರೌಪದಿ ಮುರ್ಮು ಶ್ರೀಮತಿ ದ್ರೌಪದಿ ಮುರ್ಮು ಸೌಜನ್ಯ ಭೇಟಿ ಮಾಡಿದರು.
ಸೆಪ್ಟೆಂಬರ್ 2023 ರಲ್ಲಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಎಫ್‍ಕೆಸಿಸಿಐನ ಪ್ರಮುಖ ಕಾರ್ಯಕ್ರಮವಾದ ಮಂಥನ್ 2023 ರ 15 ನೇ ಆವೃತ್ತಿ ನಡೆಯಲಿದ್ದು, ಇದಕ್ಕೆ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ರಾಷ್ಟಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ರವರನ್ನು ಆಹ್ವಾನಿಸಲಾಯಿತು.
ವರ್ಷ 2009 ರಲ್ಲಿ ನಡೆದ ಎಫ್‍ಕೆಸಿಸಿಐನ ಮಂಥನ ಕಾರ್ಯಕ್ರಮವನ್ನು ಆಗಿನ ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಜಿ ಅವರು ಉದ್ಘಾಟಿಸಿದ್ದರು ಎಂದು ಬಿ.ವಿ ಗೋಪಾಲ್ ರೆಡ್ಡಿ, ಅಧ್ಯಕ್ಷರು ತಿಳಿಸಿದರು. ಮಂಥನ್ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್-ಅಪ್‍ಗಳನ್ನು ರಚಿಸುವಲ್ಲಿ ಮತ್ತು ಯಶಸ್ವಿ ಉದ್ಯಮಿಯಾಗಲು ಹಾಗೂ ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ.
ಗೌರವಾನ್ವಿತ ಘನತೆವೆತ್ತ ರಾಷ್ಟ್ರಪತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವುದಕ್ಕೆ ನಮ್ಮ ಆಹ್ವಾನವನ್ನು ತಕ್ಷಣವೇ ಒಪ್ಪಿಕೊಂಡರು ಮತ್ತು ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗದಾತರಾಗಲು ಯುವ ಉದ್ಯಮಿಗಳನ್ನು ಸೃಷ್ಟಿಸಲು ಎಫ್‍ಕೆಸಿಸಿಐಯ ಪ್ರಯತ್ನಗಳನ್ನು ಶ್ಲಾಘಿಸಿದರು ಹಾಗೂ ಇಂತಹ ಅನೇಕ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ನಡೆಸಲು ಸಲಹೆ ನೀಡಿದರು.
ಬಿ ವಿ ಗೋಪಾಲ್ ರೆಡ್ಡಿ
ಅಧ್ಯಕ್ಷರು, ಎಫ್‍ಕೆಸಿಸಿಐ